
ನವದೆಹಲಿ: ಕೋವಿಡ್ ಲಸಿಕೆ ಅಭಿಯಾನ ಉತ್ತೇಜಿಸಲು ಇಂದು ಪ್ರಧಾನಿ ಮೋದಿ ಮಹತ್ವದ ಸಭೆ ನಡೆಸಲಿದ್ದಾರೆ ಮಧ್ಯಾಹ್ನ 12 ಗಂಟೆಗೆ ಲಸಿಕೆ ಕಡಿಮೆ ನೀಡಿರುವ ಜಿಲ್ಲಾಡಳಿತಗಳೊಂದಿಗೆ ವರ್ಚುಯಲ್ ಮೂಲಕ ಸಭೆ ನಡೆಸಲಿರುವ ಮೋದಿ, ಲಸಿಕೆ ನೀಡಿಕೆಗೆ ವೇಗ ನೀಡುವಂತೆ ಸೂಚಿಸಲಿದ್ದಾರೆ.
ಕಡಿಮೆ ಲಸಿಕೆ ನೀಡಿರುವ 49 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಭಾಗಿಯಾಗಲಿದ್ದಾರೆ. ಇದರೊಂದಿಗೆ ಜಾರ್ಖಂಡ್, ಮಣಿಪುರ, ನಾಗಾಲ್ಯಾಂಡ್, ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ಮೇಘಾಲಯ ಸೇರಿದಂತೆ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಲಸಿಕೆ ವಿತರಣೆಯಾಗಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಮೋದಿ ಸಭೆ ನಡೆಸಲಿದ್ದು, ಲಸಿಕೆ ವಿತರಣೆ ವಿಳಂಬ, ಹಿನ್ನಡೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಲಸಿಕೆ ನೀಡಿಕೆ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲು ಸೂಚಿಸಲಿದ್ದಾರೆ.