ನವದೆಹಲಿ: ನಮಗೆ ಯಾವಾಗಲೂ ಜನರೇ ಮೊದಲು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಕಡಿತ, ಉಜ್ವಲಾ ಯೋಜನೆ ಗ್ಯಾಸ್ ಸಿಲಿಂಡರ್ ಸಹಾಯಧನ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.
ಇಂತಹ ನಿರ್ಧಾರಗಳು ಸಕಾರಾತ್ಮಕ ಪರಿಣಾಮ ಬೀರುತ್ತವೆ. ವಿಶೇಷವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಿರ್ಧಾರ ವಿವಿಧ ಕ್ಷೇತ್ರಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಜನರು ಜೀವನ ನಡೆಸುವುದು ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.
ಉಜ್ವಲಾ ಯೋಜನೆ ಕೋಟಿಗಟ್ಟಲೆ ಭಾರತೀಯರಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡಿದೆ ಎಂದು ಉಜ್ವಲಾ ಯೋಜನೆ ಸಿಲಿಂಡರ್ ಸಬ್ಸಿಡಿ ಕುರಿತು ಟ್ವೀಟ್ ಮಾಡಿ, ಇಂತಹ ನಿರ್ಧಾರ ಕುಟುಂಬದ ಖರ್ಚು ವೆಚ್ಚವನ್ನು ಸರಾಗಗೊಳಿಸುತ್ತದೆ ಎಂದು ಹೇಳಿದ್ದಾರೆ.