ನವದೆಹಲಿ: 77 ರಷ್ಟು ಅನುಮೋದನೆ ರೇಟಿಂಗ್ ನೊಂದಿಗೆ ಪ್ರಧಾನಿ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ಸರ್ವೇ ಹೇಳಿದೆ.
ಈ ಮೂಲಕ ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಬಲ್ಯ ಮುಂದುವರೆದಿದೆ. ಮೋದಿಯವರು ಪ್ರಧಾನ ಮಂತ್ರಿಯಾದಾಗಿನಿಂದ ಭಾರತದ ಬಗೆಗಿನ ವಿಶ್ವದ ದೇಶಗಳ ದೃಷ್ಟಿಕೋನವು ತೀವ್ರ ಬದಲಾಗಿದೆ.
ಸಮೀಕ್ಷೆಯೊಂದರ ಪ್ರಕಾರ ಪಿಎಂ ಮೋದಿ ಮತ್ತೊಮ್ಮೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಶೇಕಡ 77 ಅನುಮೋದನೆಯೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮಾರ್ನಿಂಗ್ ಕನ್ಸಲ್ಟ್ ಆಗಸ್ಟ್ 2019 ರಿಂದ ಕಂಪೈಲ್ ಮಾಡುತ್ತಿರುವ ಗ್ಲೋಬಲ್ ಲೀಡರ್‌ಶಿಪ್ ಅಪ್ರೂವಲ್ ಪ್ರಾಜೆಕ್ಟ್, ಪಿಎಂ ಮೋದಿ ಕಾರ್ಯನಿರ್ವಹಿಸುತ್ತಿರುವಾಗಿನಿಂದ 71% ಕ್ಕಿಂತ ಹೆಚ್ಚು ಅನುಮೋದನೆ ರೇಟಿಂಗ್ ಅನ್ನು ಕಾಯ್ದುಕೊಂಡಿದ್ದಾರೆ. 2022 ರಿಂದ ಪ್ರಧಾನಿ ಮೋದಿಯವರ ಅನುಮೋದನೆ ರೇಟಿಂಗ್ 75% ಕ್ಕಿಂತ ಹೆಚ್ಚಾಗಿದೆ.
ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗಿಂತ ಭಾರಿ ಮುಂದಿದ್ದಾರೆ. ವಿಶ್ವ ನಾಯಕರನ್ನು ಸಮೀಕ್ಷೆ ಮಾಡಿರುವ ಪ್ರಕಾರ, 22 ಪ್ರಮುಖ ರಾಷ್ಟ್ರಗಳ ನಾಲ್ಕು ವಿಶ್ವ ನಾಯಕರು ಮಾತ್ರ 50% ಕ್ಕಿಂತ ಹೆಚ್ಚು ರೇಟಿಂಗ್ ಅನುಮೋದನೆ ಹೊಂದಿದ್ದಾರೆ.
ತೀರಾ ಇತ್ತೀಚಿನ ಅನುಮೋದನೆಯ ರೇಟಿಂಗ್ ಗಳು ಮೇ 30 ಮತ್ತು ಜೂನ್ 6, 2023 ರ ನಡುವೆ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿವೆ.
ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬ್ರೆಜಿಲ್, ಕೆನಡಾ, ಜೆಕ್ ರಿಪಬ್ಲಿಕ್, ಫ್ರಾನ್ಸ್, ಜರ್ಮನಿ, ಭಾರತ, ಐರ್ಲೆಂಡ್, ಇಟಲಿ, ಜಪಾನ್, ಮೆಕ್ಸಿಕೋ, ನೆದರ್ಲ್ಯಾಂಡ್ಸ್, ನಾರ್ವೆ, ಪೋಲೆಂಡ್, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ದೇಶಗಳ ರಾಜಕೀಯ ವ್ಯಕ್ತಿಗಳ ಸಾರ್ವಜನಿಕ ಅಭಿಪ್ರಾಯ ಮತ್ತು ರಾಷ್ಟ್ರೀಯ ಪ್ರವೃತ್ತಿಗಳನ್ನು ಸಮೀಕ್ಷೆಯು ಮೇಲ್ವಿಚಾರಣೆ ಮಾಡುತ್ತದೆ.
ಮಾರ್ನಿಂಗ್ ಕನ್ಸಲ್ಟ್ ಪ್ರಕಾರ ರೇಟಿಂಗ್‌ಗಳು ಪ್ರತಿದಿನ 20,000 ಕ್ಕೂ ಹೆಚ್ಚು ಜಾಗತಿಕ ಆನ್‌ಲೈನ್ ಸಂದರ್ಶನಗಳನ್ನು ಆಧರಿಸಿವೆ.