alex Certify ಸಂಭ್ರಮದ ದಿವ್ಯ ಕಾಶಿ, ಭವ್ಯ ಕಾಶಿ; ನಾಳೆ ಮೋದಿಯಿಂದ ಉದ್ಘಾಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಭ್ರಮದ ದಿವ್ಯ ಕಾಶಿ, ಭವ್ಯ ಕಾಶಿ; ನಾಳೆ ಮೋದಿಯಿಂದ ಉದ್ಘಾಟನೆ

ಪ್ರಾಚೀನ ಸಂಸ್ಕೃತಿಯ ಮರು ಸ್ಥಾಪಿಸುವ ಮಹಾನ್ ಮಹಾತ್ವಕಾಂಕ್ಷಿ ಉದ್ದೇಶದ ಗಂಗಾ ನದಿ ದಡದಲ್ಲಿರುವ ಮರುಸ್ಥಾಪಿತ ಕಾಶಿ ಕ್ಷೇತ್ರದ ಅಭಿವೃದ್ಧಿ ಯೋಜನೆ, ಕಾಶಿ ವಿಶ್ವನಾಥ ಧಾಮವನ್ನು ಪ್ರಧಾನಿ ಮೋದಿ ಅವರು ನಾಳೆ ಉದ್ಘಾಟಿಸಲಿದ್ದಾರೆ.

ಈ ಮೂಲಕ ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಮೋದಿ ಕೈಗೊಂಡ ಭವ್ಯ ಕನಸು ಇದಾಗಿದೆ. ಭವ್ಯ ಕಾಶಿ, ದಿವ್ಯಕಾಶಿ ಎಂಬ ಹೆಸರಿನಲ್ಲಿ ಜಗತ್ತೇ ಸಂಭ್ರಮಿಸುವಂತೆ ಈ ಕಾರ್ಯ ನಡೆಯಲಿದೆ. ನಾಳೆ ಇದರ ಉದ್ಘಾಟನೆ ನಡೆಯಲಿದ್ದು, ಅಲ್ಲಿಂದ ಒಂದು ತಿಂಗಳು ಅಂದರೆ ಸಂಕ್ರಾಂತಿ ವರೆಗೂ ಇಡೀ ದೇಶದಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಕಾಶಿ ಒಂದು ಅದ್ಭುತ ಅಕ್ಷರಧಾಮವಾಗಿ, ಧಾರ್ಮಿಕ ಕ್ಷೇತ್ರವಾಗಿ ಜಾಗೃತಿಯ ತಾಣವಾಗಿ ಕಂಗೊಳಿಸಲಿದೆ.

ದೇಶವೇ ಸಂಭ್ರಮಪಡುವ ಈ ಕಾರ್ಯಕ್ರಮದ ನೇರಪ್ರಸಾರ ಬಿಜೆಪಿಯ ಮಂಡಲ ವ್ಯಾಪ್ತಿಯಲ್ಲೂ ನಡೆಯುತ್ತದೆ. ಸುಮಾರು 51 ಸಾವಿರ ಸ್ಥಳಗಳಲ್ಲಿ ಎಲ್ಇಡಿ ಪರದೆಯ ಮೂಲಕ ನೇರ ಪ್ರಸಾರ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲಿ, ದೇವಸ್ಥಾನಗಳಲ್ಲಿ, ಮಠ, ಆಶ್ರಮಗಳಲ್ಲಿ ಈ ಕಾರ್ಯಕ್ರಮ ಸಂಭ್ರಮದಿಂದ ಆಂದೋಲನದ ರೀತಿಯಲ್ಲಿ ನಡೆಯಲಿದೆ.

ಒಂದು ತಿಂಗಳ ಕಾಲ ನಡೆಯುವ ಈ ಸಮಾರಂಭ ಕೇವಲ ಕಾರ್ಯಕ್ರಮ ಉದ್ಘಾಟನೆ ಮಾತ್ರ ಆಗಿರುವುದಿಲ್ಲ. ಇದರ ಜೊತೆಗೆ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳ ಸಭೆ ದೇಶದ ಎಲ್ಲಾ ಮೇಯರ್ ಗಳ ಸಮ್ಮೇಳನ ಕೂಡ ನಡೆಯಲಿದೆ. ಕೃಷಿ ಬಗ್ಗೆ ಚರ್ಚೆ ಕೂಡ ಈ ಅವಧಿಯಲ್ಲಿ ನಡೆಯಲಿದೆ. ಕೇಂದ್ರ ಸರ್ಕಾರದ ಕಿರು ಹೊತ್ತಿಗೆ ಕೂಡ ಬಿಡುಗಡೆಯಾಗಲಿವೆ,

ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ಜೊತೆಗೆ ಕೇಂದ್ರ ಸಚಿವರು, ಪ್ರಮುಖವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಅಲ್ಲದೇ, ಸಾಧು, ಸಂತರು, ಧರ್ಮ ಗುರುಗಳು ಭಾಗವಹಿಸಲಿದ್ದಾರೆ. ಇಡೀ ಜಗತ್ತೇ ಕಾಶಿಯ ಕಡೆ ನಾಳೆ ನೋಡುತ್ತದೆ. ಪ್ರಾಚೀನ ಸಂಸ್ಕೃತಿಯ ವೈಭವ ಮರುಕಳಿಸಲಿದೆ. ಸಾಮರಸ್ಯ ಏಕತೆಯ ಭಾಗವಾಗಿ ಈ ಕಾರ್ಯಕ್ರಮ ನಡೆಯಲಿದೆ.

ಈ ಐತಿಹಾಸಿಕ ಮತ್ತು ಅಭೂತಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಕ್ಷದ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಿದ್ದಾರೆ. ಈ ಕಾರ್ಯಕ್ರಮಗಳು ಒಂದು ತಿಂಗಳ ಕಾಲ ದೇಶದಾದ್ಯಂತ ನಡೆಯಲಿವೆ. 13ನೇ ಡಿಸೆಂಬರ್ 2021ರಿಂದ ಪ್ರಾರಂಭವಾಗಲಿದ್ದು, ಮಕರ ಸಂಕ್ರಾಂತಿ ದಿನ 14ನೇ ಜನವರಿ 2021 ವರೆಗೆ ಮುಂದುವರಿಯುತ್ತದೆ. ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...