ನವದೆಹಲಿ: ಜುಲೈ 31 ರಂದು ‘ಮನ್ ಕಿ ಬಾತ್’ ಕಾರ್ಯಕ್ರಮ ಪ್ರಸಾರವಾಗಲಿದ್ದು, ಪ್ರಧಾನಿ ಮೋದಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ.
ಈ ತಿಂಗಳ 31 ರಂದು ಪ್ರಸಾರವಾಗಲಿರುವ ಆಲ್ ಇಂಡಿಯಾ ರೇಡಿಯೊದ ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕಾಗಿ ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಜನರಿಗೆ ತಿಳಿಸಿದ್ದಾರೆ. NaMo ಅಪ್ಲಿಕೇಶನ್ ಮತ್ತು MyGov ಜನರ ಕಾಮೆಂಟ್ ಗಳನ್ನು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.
ಜನರು 1800-11-7800 ಟೋಲ್ ಫ್ರೀ ಸಂಖ್ಯೆಗೆ ಡಯಲ್ ಮಾಡಿ ತಮ್ಮ ಸಂದೇಶವನ್ನು ದಾಖಲಿಸಬಹುದು ಎಂದು ಅವರು ತಿಳಿಸಿದ್ದಾರೆ.
‘ಮನ್ ಕಿ ಬಾತ್’ ಮಾಸಿಕ ರೇಡಿಯೋ ಕಾರ್ಯಕ್ರಮದ 91 ನೇ ಸಂಚಿಕೆಯಾಗಿದೆ. ಜುಲೈ 28 ರವರೆಗೆ ಫೋನ್ ಲೈನ್ ಗಳು ತೆರೆದಿರುತ್ತವೆ. ಜನರು 1922 ರಲ್ಲಿ ಮಿಸ್ಡ್ ಕಾಲ್ ನೀಡಬಹುದು. ಪ್ರಧಾನ ಮಂತ್ರಿಗೆ ನೇರವಾಗಿ ತಮ್ಮ ಸಲಹೆಗಳನ್ನು ನೀಡಲು SMS ನಲ್ಲಿ ಸ್ವೀಕರಿಸಿದ ಲಿಂಕ್ ಅನ್ನು ಅನುಸರಿಸಬಹುದಾಗಿದೆ ಎಂದು ಹೇಳಲಾಗಿದೆ.