![](https://kannadadunia.com/wp-content/uploads/2023/09/vande-bharath-metro.jpg)
ನವದೆಹಲಿ : ಕರ್ನಾಟಕಕ್ಕೆ ಮೋದಿ ಸರ್ಕಾರವು ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಇಂದು ಎರಡು ವಂದೇ ಭಾರತ್ ಎಕ್ಸ್ ಪ್ರೆಸ್ ಹಾಗೂ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ.
ಇಂದು ಪ್ರಧಾನಿ ಮೋದಿ ಅವರು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಅಯೋಧ್ಯೆ ಧಾಮ್ ರೈಲ್ವೆ ನಿಲ್ದಾಣ, ಎಂಟು ಹೊಸ ರೈಲುಗಳು ಮತ್ತು 15,000 ಕೋಟಿ ರೂ.ಗಳ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಮಾಲ್ಡಾ ಟೌನ್-ಬೆಂಗಳೂರು ನಡುವಿನ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಇಂಟರ್ಸಿಟಿ ರೈಲುಗಳಾದ ಎರಡು ಅಮೃತ್ ಭಾರತ್ ರೈಲುಗಳಿಗೆ ಹಾಗೂ ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಈ ಹೊಸ ವಂದೇ ಭಾರತ್ ರೈಲುಗಳು ಮಂಗಳೂರು-ಮಡ್ಗಾಂವ್ (ಗೋವಾ) ಹಾಗೂ ಬೆಂಗಳೂರು-ಕೊಯಮತ್ತೂರು ನಡುವೆ, ಅಮೃತ ಭಾರತ್ ರೈಲು ಮಾಲ್ಡಾ-ಬೆಂಗಳೂರು ನಡುವೆ ಸಂಚರಿಸಲಿವೆ.