ಪ್ರಧಾನಿ ನರೇಂದ್ರ ಮೋದಿಯವರು ಇಂದು ಹಿಮಾಚಲ ಪ್ರದೇಶದಲ್ಲಿ ನಾಲ್ಕನೇ ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ರೈಲು ಅತ್ಯಂತ ಆಧುನಿಕ ಸುರಕ್ಷಿತ ವಿನ್ಯಾಸಗಳನ್ನು ಒಳಗೊಂಡಿದ್ದು, ಪ್ರಯಾಣಿಕರಿಗೆ ಆರಾಮದಾಯಕವಾಗಿರಲಿದೆ.
ಇಂದು ಬೆಳಗ್ಗೆ 9:30ಕ್ಕೆ ಹಿಮಾಚಲ ಪ್ರದೇಶದ ಉನಾ ರೈಲು ನಿಲ್ದಾಣದಿಂದ ಹೊರಡಲಿರುವ ಈ ರೈಲು ಶ್ರೀ ಆನಂದಪುರ ಸಾಹಿಬ್, ಚಂಡೀಗಢ, ಅಂಬಾಲಾ ಮಾರ್ಗವಾಗಿ ನವದೆಹಲಿಗೆ 3.30ಕ್ಕೆ ತಲುಪಲಿದೆ.
ಈ ರೈಲು ಸಂಚಾರದಿಂದ ಪಂಜಾಬ್, ಹಿಮಾಚಲ ಹಾಗೂ ಹರಿಯಾಣ ಜನತೆಗೆ ಅನುಕೂಲವಾಗಲಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.