ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದು ಒಂದು ವರ್ಷ ಕಳೆಯುತ್ತಲೇ, ಜುಲೈ 29ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯಡಿ ತರಲಾದ ಸುಧಾರಣೆಗಳ ಕುರಿತು ಪ್ರಧಾನಿ ಮಾತನಾಡಲಿರುವ ವೇಳೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಹ ಇರಲಿದ್ದಾರೆ.
ಮಳೆ ಕಡಿಮೆಯಾದ್ರೂ ತಗ್ಗದ ಪ್ರವಾಹ: ಜಮೀನು, ಗ್ರಾಮ ಜಲಾವೃತ- ಊರು ತೊರೆದ ಗ್ರಾಮಸ್ಥರು
2020ರಲ್ಲಿ ಕೇಂದ್ರ ಸಂಪುಟ ಅನುಮೋದಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು 1986ರಲ್ಲಿ ಅನುಷ್ಠಾನಕ್ಕೆ ಬಂದಿದ್ದ ಶಿಕ್ಷಣ ಸಂಬಂಧ ರಾಷ್ಟ್ರೀಯ ನೀತಿಯ ಬದಲಿಗೆ ಜಾರಿಗೆ ಬಂದಿದೆ.
ಐದನೇ ತರಗತಿವರೆಗೆ ಮಕ್ಕಳಿಗೆ ಪ್ರಾದೇಶಿಕ ಭಾಷೆಯಲ್ಲೇ ಪಾಠ ಹೇಳುವುದರಿಂದ ಹಿಡಿದು, 10+2ರ ಶಾಲಾ ಮಾದರಿ ಬದಲಿಗೆ 5+3+3+4ರ ರಚನೆಯ ಶಾಲಾ ಕ್ರಮವನ್ನು ಪರಿಚಯಿಸುವವರೆಗೂ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮೇಲ್ಕಂಡ ನೀತಿ ಮೂಲಕ ತರಲಾಗಿದೆ.