ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಿಗ್ಗೆ 11 ಗಂಟೆಗೆ ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮದ 89 ನೇ ಸಂಚಿಕೆ ‘ಮನ್ ಕಿ ಬಾತ್’ನಲ್ಲಿ ದೇಶದ ಜನರನ್ನುದ್ದೇಸಿ ಮಾತನಾಡಲಿದ್ದಾರೆ.
ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನ, AIR ನ್ಯೂಸ್ ವೆಬ್ ಸೈಟ್ ಮತ್ತು ನ್ಯೂಸ್ ಏರ್ ಮೊಬೈಲ್ ಅಪ್ಲಿಕೇಶನ್ ನ ನೆಟ್ ವರ್ಕ್ ನಲ್ಲಿ ಪ್ರಸಾರ ಮಾಡಲಾಗುತ್ತದೆ. ಹಿಂದಿ ಪ್ರಸಾರದ ನಂತರ, AIR ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆ.
‘ಮನ್ ಕಿ ಬಾತ್’ ಈ ಆವೃತ್ತಿಗೆ ಹಲವಾರು ಸಲಹೆ ಸ್ವೀಕರಿಸಿದ್ದೇನೆ ಎಂದು ಪ್ರಧಾನಿ ಹೇಳಿದ್ದು, ಚರ್ಚಿಸಲಾದ ವಿಷಯಗಳ ಕುರಿತು ಆಸಕ್ತಿದಾಯಕ ಲೇಖನಗಳನ್ನು ಒಳಗೊಂಡಿರುವ ‘ಮನ್ ಕಿ ಬಾತ್’ ಕಳೆದ ತಿಂಗಳ ಸಂಚಿಕೆಯನ್ನು ಆಧರಿಸಿದ ಕಿರುಪುಸ್ತಕವನ್ನು ಸಹ ಹಂಚಿಕೊಂಡಿದ್ದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದರು.
ಅಕ್ಟೋಬರ್ 3, 2014 ರಂದು ‘ಮನ್ ಕಿ ಬಾತ್’ ಮೊದಲ ಕಾರ್ಯಕ್ರಮ ಪ್ರಸಾರ ಮಾಡಲಾಯಿತು. ಪ್ರತಿ ತಿಂಗಳ ಕೊನೆಯ ಭಾನುವಾರದಂದು ‘ಮನ್ ಕಿ ಬಾತ್’ ಪ್ರಸಾರ ಮಾಡಲಾಗುತ್ತದೆ.