Watch | ಮುಂಬೈ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ; ಯುವ ಜನತೆಯೊಂದಿಗೆ ಮೋದಿ ಮಾತುಕತೆ 20-01-2023 7:51AM IST / No Comments / Posted In: Karnataka, Latest News, Live News ಗುರುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಮುಂಬೈ ಮೆಟ್ರೋದ ಎರಡು ಮಾರ್ಗಗಳಿಗೆ ಚಾಲನೆ ನೀಡಿದ್ದು, ಬಳಿಕ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ಸಂದರ್ಭದಲ್ಲಿ ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವ ಜನತೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತುಕತೆ ನಡೆಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 12600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಲೈನ್ 2ಎ ಹಾಗೂ ಲೈನ್ 7 ಉದ್ಘಾಟನೆ ನೆರವೇರಿಸಲಾಗಿದ್ದು,18.6 ಕಿಲೋಮೀಟರ್ ಉದ್ದದ ಲೈನ್ 2 ಎ ದಹಿಸರ್ ನಿಂದ ಡಿಎನ್ ನಗರದವರೆಗೆ ಸಂಚರಿಸಲಿದೆ. 16.5 ಕಿಲೋ ಮೀಟರ್ ಉದ್ದದ ಲೈನ್ 7 ಅಂಧೇರಿ ಈಸ್ಟ್ ನಿಂದ ದಹಿಸರ್ ವರೆಗೆ ಸಂಚರಿಸಲಿದೆ. ನರೇಂದ್ರ ಮೋದಿಯವರು ಈ ಎರಡೂ ಮಾರ್ಗಗಳ ಉದ್ಘಾಟನೆ ನೆರವೇರಿಸಿದ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೊದಲಾದವರಿದ್ದರು. ಉದ್ಘಾಟನೆ ಬಳಿಕ ನರೇಂದ್ರ ಮೋದಿಯವರು ಮೆಟ್ರೋದಲ್ಲಿ ಸಂಚರಿಸಿದ್ದು, ಈ ವೇಳೆ ಯುವ ಜನತೆ, ಮಹಿಳೆಯರು ಹಾಗೂ ಮೆಟ್ರೋ ರೈಲ್ ಕಾರ್ಮಿಕರ ಜೊತೆ ಮಾತುಕತೆ ನಡೆಸಿದ್ದಾರೆ. PM @narendramodi takes a ride on the newly inaugurated #MumbaiMetro Rail Lines 2A & 7 and interacts with the youth onboard@PMOIndia#MumbaiOnFastTrack pic.twitter.com/EiRKKmibzH — DD News (@DDNewslive) January 19, 2023 Mumbai youth narrate how Metro will transform their lives to PM @narendramodi, and the PM's special request to them.@PMOIndia#MumbaiOnFastTrack#MumbaiMetro pic.twitter.com/cQBZEbhd00 — DD News (@DDNewslive) January 19, 2023