ನವದೆಹಲಿ: ಏಪ್ರಿಲ್ 11 ರಿಂದ 14 ರವರೆಗೆ ದೇಶಾದ್ಯಂತ ಉತ್ವದ ಮಾದರಿ ವ್ಯಾಕ್ಸಿನ್ ನೀಡಿಕೆ ಅಭಿಯಾನ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ಸವದ ಮಾದರಿಯಲ್ಲಿ ವ್ಯಾಕ್ಸಿನ್ ಅಭಿಯಾನ ಕೈಗೊಳ್ಳಬೇಕಾದ ಅಗತ್ಯವಿದೆ. ಎಲ್ಲಾ ರಾಜ್ಯಗಳ ಕಠಿಣ ನಿಯಮ ಜಾರಿಗೊಳಿಸಿ ಲಸಿಕೆ ವ್ಯರ್ಥವಾಗುವುದನ್ನು ತಡೆಯೋಣ. ಲಸಿಕೆ ವ್ಯರ್ಥವಾಗುವುದನ್ನು ಶೂನ್ಯಕ್ಕೆ ಇಳಿಸೋಣ. ನಾಲ್ಕು ದಿನ ದೇಶಾದ್ಯಂತ ಉತ್ಸವ ನಡೆಯಬೇಕಿದೆ ಎಂದಿದ್ದಾರೆ.
ಮೊದಲು ನಮಗೆ ಲಸಿಕೆ ಇಲ್ಲದ ಕಾರಣ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಈಗ ಲಾಕ್ ಡೌನ್ ಬದಲಿಗೆ ನೈಟ್ ಕರ್ಫ್ಯೂ ಜಾರಿಗೊಳಿಸಬಹುದು. ಅದನ್ನು ಕೊರೋನಾ ಕರ್ಫ್ಯೂ ಎಂದು ಕರೆಯಿರಿ ಎಂದು ಹೇಳುವ ಮೂಲಕ ದೇಶಾದ್ಯಂತ ಲಾಕ್ ಡೌನ್ ಜಾರಿ ತಳ್ಳಿಹಾಕಿದ್ದಾರೆ. ಸೋಂಕು ತಡೆಗೆ ನೈಟ್ ಕರ್ಫ್ಯೂಗೆ ಸಲಹೆ ನೀಡಿದ್ದಾರೆ.