ನವದೆಹಲಿ: ಕೊರೋನಾ ಸಂಖ್ಯೆ ಹೆಚ್ಚಳದ ಬಗ್ಗೆ ಚಿಂತೆ ಮಾಡಬೇಡಿ. ಹೆಚ್ಚು ಟೆಸ್ಟ್ ಮಾಡಿದಷ್ಟು ಕೇಸ್ ಹೆಚ್ಚಾಗಿ ಬರುತ್ತವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕೊರೋನಾ ಪರಿಸ್ಥಿತಿ ಕುರಿತಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಭಾಷಣ ಮಾಡಿದ ಅವರು, ಟೆಸ್ಟಿಂಗ್ ಮಾಡದೇ ಇದ್ದರೆ ಎಲ್ಲರಿಗೂ ಕೊರೋನಾ ಹರಡುತ್ತದೆ. ಪ್ರತಿಯೊಬ್ಬರನ್ನು ಜಾಗೃತಗೊಳಿಸಿ ನಿಯಮ ಪಾಲಿಸುವಂತೆ ತಿಳಿಸಬೇಕೆಂದು ಹೇಳಿದ್ದಾರೆ.
ಮೈಕ್ರೋ ಕಂಟೇನ್ಮೆಂಟ್ ಜೋನ್ ನಲ್ಲಿ ಕಾರ್ಯತಂತ್ರ ಜಾರಿಗೊಳಿಸಬೇಕು. ಕೊರೋನಾ ವೈರಸ್ ಅನ್ನು ಲಘುವಾಗಿ ಪರಿಗಣಿಸಬೇಡಿ. ಸರಿಯಾಗಿ ಸ್ಯಾಂಪಲ್ ಸಂಗ್ರಹ ಆಗಿಲ್ಲ ಎನ್ನುವ ದೂರುಗಳು ಬರುತ್ತಿವೆ. ನಾಲಿಗೆಯ ಮೇಲಿನ ಸ್ಯಾಂಪಲ್ ತೆಗೆದು ನೆಗೆಟಿವ್ ರಿಪೋರ್ಟ್ ಕೊಡಲಾಗುತ್ತಿದೆ. ಗಂಟಲಿನ ಆಳದಿಂದ ಸ್ಯಾಂಪಲ್ ತೆಗೆಯಬೇಕಿದೆ ಎಂದು ತಿಳಿಸಿದ್ದಾರೆ.
ಸರಿಯಾಗಿ ಸ್ಯಾಂಪಲ್ ಸಂಗ್ರಹ ಆಗಿಲ್ಲ. ಲಕ್ಷಣಗಳಿಲ್ಲದ ಸೋಂಕಿತರು ಹೆಚ್ಚಾಗುತ್ತಿದ್ದು, ಇಡೀ ಕುಟುಂಬ ಸೋಂಕಿತವಾಗುತ್ತಿವೆ. ಇದಕ್ಕೆ ಪರಿಹಾರವೆಂದರೆ ಹೆಚ್ಚಿನ ಟೆಸ್ಟಿಂಗ್ ಮಾತ್ರ. ಟೆಸ್ಟಿಂಗ್ ಕಂಟೇನ್ಮೆಂಟ್ ಜೋನ್ ಗಳಲ್ಲಿ ಹೆಚ್ಚಾಗಬೇಕು. ಟೆಸ್ಟಿಂಗ್, ಟ್ರ್ಯಾಕಿಂಗ್ ಮುಖ್ಯವಾಗಿದೆ. ಎಲ್ಲ ರಾಜ್ಯಗಳಲ್ಲೂ ಇದನ್ನು ಅನುಸರಿಸಬೇಕು. ಪಾಸಿಟಿವ್ ರೇಟ್ ಕಡಿತಗೊಳಿಸಲು ಶ್ರಮಿಸಬೇಕು. ಟೆಸ್ಟ್ ಮಾಡುವುದರಿಂದ ಸಮಸ್ಯೆಯಿಂದ ಹೊರಬರಬಹುದು. ಶೇಕಡ 70 ರಷ್ಟು ಆರ್.ಟಿ.ಪಿ.ಸಿ.ಆರ್. ಟೆಸ್ಟ್ ಮಾಡಬೇಕು ಎಂದು ಹೇಳಿದ್ದಾರೆ.