ನವದೆಹಲಿ: ಕೆಲವು ರಾಜ್ಯಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೊರೋನಾ ಪರಿಸ್ಥಿತಿ ಕುರಿತಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಭಾಷಣ ಮಾಡಿದ ಮೋದಿ, ಕೊರೋನಾ ಹರಡುತ್ತಿರುವ ರಾಜ್ಯಗಳ ಬಗ್ಗೆ ವಿಶೇಷವಾಗಿ ಚರ್ಚೆ ನಡೆಸಿದ್ದು ಕೆಲವು ರಾಜ್ಯಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.
ಇನ್ನು ಎರಡು ಮೂರು ವಾರಗಳ ಕಾಲ ಕಠಿಣ ನಿಯಮ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ. ಕೊರೊನಾ ಸೋಂಕು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ವೈರಸ್ ಆಡುತ್ತಿರುವ ವೇಗ ಜಾಸ್ತಿಯಾಗಿದೆ. ಮೊದಲ ಅಲೆಗಿಂತ ಅತಿಹೆಚ್ಚಿನ ಸಂಖ್ಯೆಯನ್ನು ಹಲವು ರಾಜ್ಯಗಳು ಕಂಡಿದೆ. ನಮ್ಮ ಬಳಿ ವ್ಯಾಕ್ಸಿನ್ ಇದೆ. ಜನರ ಜೊತೆ ವೈದ್ಯರು, ಆರೋಗ್ಯ ಕಾರ್ಯಕರ್ತರು, ಫ್ರೆಂಟ್ ಲೈನ್ ವರ್ಕರ್ಸ್ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಕೊರೋನಾ ತಡೆಗೆ ಅನೇಕ ಮಾರ್ಗಗಳಿವೆ. ಮೈಕ್ರೋ ಕಂಟೆನ್ಮೆಂಟ್ ಜೋನ್, ಲಾಕ್ಡೌನ್ ಕೂಡ ಸೇರಿವೆ. ನೈಟ್ ಕರ್ಫ್ಯೂವನ್ನು ಕೊರೋನಾ ಕರ್ಫ್ಯೂ ಎಂದೇ ಕರೆಯಿರಿ. ಮೈಕ್ರೋ ಕಂಟೇನ್ಮೆಂಟ್ ಜೋನ್ ಕಡೆ ಹೆಚ್ಚಿನ ನಿಗಾವಹಿಸಬೇಕಿದೆ ಎಂದು ಹೇಳಿದ್ದಾರೆ.