alex Certify ಆಕಸ್ಮಿಕವಾಗಿ ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆಗೆ 5 ಲಕ್ಷ ರೂ. ಜಮಾ: ಪ್ರಧಾನಿ ಮೋದಿ ಕಳುಹಿಸಿದ್ದಾರೆ ಎಂದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕಸ್ಮಿಕವಾಗಿ ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆಗೆ 5 ಲಕ್ಷ ರೂ. ಜಮಾ: ಪ್ರಧಾನಿ ಮೋದಿ ಕಳುಹಿಸಿದ್ದಾರೆ ಎಂದ ಭೂಪ..!

ಖಗಾರಿಯಾ: ಆಕಸ್ಮಿಕವಾಗಿ ವ್ಯಕ್ತಿಯೊಬ್ಬರ ಬ್ಯಾಂಕ್ ಅಕೌಂಟ್ ಗೆ 5.5 ಲಕ್ಷ ರೂ. ಜಮಾ ಆಗಿದೆ. ಆದರೆ ಅದನ್ನು ಹಿಂದಿರುಗಿಸಲು ಆ ವ್ಯಕ್ತಿ ನಿರಾಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದಾರೆ ಎಂದು ಹೇಳಿರುವ ಅಚ್ಚರಿಯ ಘಟನೆ ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ನಡೆದಿದೆ.

ಖಗಾರಿಯಾದ ಗ್ರಾಮೀಣ ಬ್ಯಾಂಕ್ ತಪ್ಪಾಗಿ ಭಕ್ತಿಯಾರ್ ಪುರ್ ಗ್ರಾಮದ ರಂಜಿತ್ ದಾಸ್ ಎಂಬವರ ಅಕೌಂಟ್ ಗೆ ಜಮಾ ಮಾಡಿದೆ. ಬ್ಯಾಂಕ್ ತನ್ನ ದೋಷವನ್ನು ಅರಿತುಕೊಂಡ ಬಳಿಕ ರಂಜಿತ್ ದಾಸ್ ಗೆ ಹಣ ಹಿಂದಿರುಗಿಸುವಂತೆ ಹಲವಾರು ನೋಟಿಸ್ ಗಳನ್ನು ಕಳುಹಿಸಿದ್ದಾರೆ. ಆದರೆ, ಆ ಹಣವನ್ನು ಹಿಂದಿರುಗಿಸಲು ಆತ ನಿರಾಕರಿಸಿದ್ದಾನೆ. ಅಲ್ಲದೆ ಅದನ್ನು ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಹೀಗಾಗಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ನಟಿ ಕಾರು ಅಡ್ಡಗಟ್ಟಿ ಗನ್‌ ಹಿಡಿದು ಬೆದರಿಸಿದ ದರೋಡೆಕೋರರು…! 7 ಲಕ್ಷ ರೂ. ನಗದು ದೋಚಿ ಪರಾರಿ

ನನಗೆ ಹಣ ಸ್ವೀಕರಿಸುವಾಗ ಬಹಳ ಸಂತೋಷವಾಯಿತು. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಪ್ರಧಾನಿ 15 ಲಕ್ಷ ರೂ. ಜಮಾ ಮಾಡುವುದಾಗಿ ಭರವಸೆ ನೀಡಿದ್ದರು, ಅದರ ಮೊದಲ ಕಂತನ್ನು ಜಮಾ ಮಾಡಿದ್ದಾರೆಂದು ಭಾವಿಸಿದೆ. ನಾನು ಎಲ್ಲಾ ಹಣವನ್ನು ಖರ್ಚು ಮಾಡಿದ್ದೇನೆ. ನನ್ನ ಬ್ಯಾಂಕ್ ಖಾತೆಯಲ್ಲಿ ಈಗ ಹಣವಿಲ್ಲ ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...