
ಝಬುವಾ: ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಪ್ರದೇಶದಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ತಮ್ಮತ್ತ ಕೈ ಬೀಸುತ್ತಿದ್ದ ಮಗುವನ್ನು ಗಮನಿಸಿ ನೀಡಿದ ಪ್ರತಿಕ್ರಿಯೆ ಇದೀಗ ವೈರಲ್ ಆಗಿದೆ.
ಮಗನೇ, ನನಗೆ ನಿನ್ನ ಪ್ರೀತಿ ಸಿಕ್ಕಿತು, ದಯವಿಟ್ಟು ನಿನ್ನ ಕೈಯನ್ನು ಕೆಳಗಿಳಿಸು, ಇಲ್ಲದಿದ್ದರೆ ನೋವಾಗುತ್ತದೆ ಎಂದು ಪಿಎಂ ಮೋದಿ ಮಗುವಿಗೆ ಹೇಳಿದ್ದಾರೆ. ವ್ಯಕ್ತಿಯೊಬ್ಬರು ಮಗುವನ್ನು ಎತ್ತಿ ಹಿಡಿದಿದ್ದರು. ಪ್ರೇಕ್ಷಕರು ಹರ್ಷೋದ್ಗಾರ ಮಾಡಿದಾಗ ತಂದೆಯ ಜೊತೆಗಿದ್ದ ಮಗು ಕೈ ಬೀಸಿದೆ.
ಮಗುವಿನ ಇಂಗಿತವನ್ನು ಪ್ರಧಾನಿ ಮೋದಿ ಒಪ್ಪಿಕೊಂಡರು. ಅವನು ತನ್ನತ್ತ ಕೈ ಬೀಸುವುದನ್ನು ಮುಂದುವರಿಸಿದರೆ ಅವನ ಕೈ ನೋಯುತ್ತದೆ ಎಂದು ಪದೇ ಪದೇ ಹೇಳುತ್ತಿದ್ದರು.
ಮಧ್ಯಪ್ರದೇಶದಲ್ಲಿ 7,550 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ನಂತರ ಪ್ರಧಾನಿ ಮೋದಿ ಅವರು ಝಬುವಾ ಜಿಲ್ಲೆಯಲ್ಲಿ ಜನಜಾತಿಯ ಮಹಾಸಭಾವನ್ನು ಉದ್ದೇಶಿಸಿ ಮಾತನಾಡಿದರು.