ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ 10,000 ಪೋಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಹೈಅಲರ್ಟ್ ಘೋಷಿಸಿದ್ದು, ಗಾಳಿಪಟಗಳಿಗೆ ನಿಷೇಧ ಹೇರಲಾಗಿದೆ. ಗಾಳಿಪಟಗಳು ಪತ್ತೆಯಾದರೆ ಹಿಡಿಯಲು 5000 ಜನರು ಸಜ್ಜಾಗಿದ್ದಾರೆ. ಉಗ್ರರ ಆತಂಕದ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಾದ್ಯಂತ ಭಾರಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಿಷೇಧಾಜ್ಞೆ ಜಾರಿಗೊಳಿಸುವ ಜೊತೆಗೆ ಫೇಶಿಯಲ್ ರೆಕಗ್ನಿಷನ್ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ.
ಡ್ರೋನ್ ಮೂಲಕ ವೈಮಾನಿಕ ಸಾಧನಗಳ ಮೇಲೆ ಸಿಬ್ಬಂದಿ ತೀವ್ರ ನಿಗಾ ವಹಿಸಿದ್ದು, ಗಣ್ಯರು ಬರುವ ಮಾರ್ಗಗಳು, ಪ್ರದೇಶಗಳು, ಆಯಕಟ್ಟಿನ ಸ್ಥಳಗಳಲ್ಲಿ ಸ್ನಿಪ್ಪರ್ ಗಳ ನಿಯೋಜಿಸಲಾಗಿದೆ. ಕೆಂಪು ಕೋಟೆಯ ಸುತ್ತಲೂ ಹೈರೆಸುಲ್ಯೂಷನ್ ಭದ್ರತಾ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಲಿದ್ದಾರೆ.