ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಮತ್ತೆ ಅಧಿಕಾರಕ್ಕೇರುವುದು ಖಚಿತವಾಗಿದೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದು, ಇದರೊಂದಿಗೆ ಅವರು ಪ್ರಧಾನಿಯಾಗಿ ಸುದೀರ್ಘ ಅವಧಿಯ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿರುವ ಮೋದಿ 10 ವರ್ಷ 19 ದಿನ ಅಧಿಕಾರದಲ್ಲಿದ್ದಾರೆ. 10 ವರ್ಷ ಆಡಳಿತ ನಡೆಸಿದ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ ನಾಲ್ಕನೇಯವರಾಗಿದ್ದಾರೆ. ಮೂರನೇ ಬಾರಿಯೂ ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದಲ್ಲಿ ಈ ಸಾಧನೆ ಮಾಡಿದ ಮೊದಲ ಪ್ರಧಾನಿ ಎನ್ನುವ ದಾಖಲೆಗೆ ಮೋದಿ ಪಾತ್ರರಾಗಿದ್ದಾರೆ.
ದೀರ್ಘಾವಧಿಗೆ ಪ್ರಧಾನಿಯಾದವರ ಪಟ್ಟಿಯಲ್ಲಿ ನೆಹರು(16 ವರ್ಷ 286 ದಿನ) ಮೊದಲ ಸ್ಥಾನದಲ್ಲಿದ್ದಾರೆ. ಇಂದಿರಾಗಾಂಧಿ(15 ವರ್ಷ 350 ದಿನ) ಎರಡನೇ ಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿ 10 ವರ್ಷ 19 ದಿನ ಆಡಳಿತ ನಡೆಸಿ ಮೂರನೇ ಸ್ಥಾನದಲ್ಲಿದ್ದಾರೆ. ಮನಮೋಹನ್ ಸಿಂಗ್ 10 ವರ್ಷ 4 ದಿನ ಆಡಳಿತ ನಡೆಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೂರನೇ ಬಾರಿಗೆ ಐದು ವರ್ಷ ಪೂರ್ಣಗೊಳಿಸಿದಲ್ಲಿ ಮೋದಿ ದಾಖಲೆ ಬರೆಯಲಿದ್ದಾರೆ.