ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಹಣ ಹಿಂಪಡೆಯುವ ಅವಕಾಶ ಕಲ್ಪಿಸಲಾಗಿದೆ. ವಿಮೆ ವ್ಯಾಪ್ತಿಯ ಮಿತಿಯಲ್ಲಿ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಹಣ ಪಡೆದ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದು, ರಾಜ್ಯದ ನಾಲ್ಕು ಬ್ಯಾಂಕುಗಳ ಫಲಾನುಭವಿಗಳೊಂದಿಗೆಲ್ಲಿ ಚರ್ಚೆ ನಡೆಸುವರು. ಬಾಗಲಕೋಟೆ ಜಿಲ್ಲೆ ಮುಧೋಳ ಸಹಕಾರಿ ಬ್ಯಾಂಕ್, ವಿಜಯಪುರ ಜಿಲ್ಲೆಯ ಡೆಕ್ಕನ್ ಅರ್ಬನ್ ಸಹಕಾರಿ ಬ್ಯಾಂಕ್, ದಾವಣಗೆರೆಯ ಮಿಲ್ಲತ್ ಕೋ-ಆಪರೇಟಿವ್ ಬ್ಯಾಂಕ್ ಮತ್ತು ಬೆಂಗಳೂರಿನ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಫಲಾನುಭವಿಗಳು ಸಂವಾದಲ್ಲಿ ಭಾಗಿಯಾಗಲಿದ್ದು, ಕೇಂದ್ರ ಸಚಿವ ಸ್ಥಾನ ಪ್ರಹ್ಲಾದ್ ಜೋಶಿ ಉಪಸ್ಥಿತರಿರುವರು.