![](https://kannadadunia.com/wp-content/uploads/2023/08/pm-modi-nation.png)
ನವದೆಹಲಿ: ಕಳೆದ 10 ವರ್ಷದ ಅವಧಿಯಲ್ಲಿ ಭಾರತ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿ ಕುರಿತಾಗಿ ಜನರಿಂದಲೇ ಅಭಿಪ್ರಾಯ ಪಡೆದುಕೊಳ್ಳಲು ‘ಜನ ಮನ’ ಸಮೀಕ್ಷೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.
ಪ್ರಧಾನಿ ಮೋದಿ ಅವರ ‘ನಮೋ’ ಅಪ್ಲಿಕೇಶನ್ ನಲ್ಲಿ ಸಮೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ಹಾಗೂ ಸಂಸದರ ಕಾರ್ಯವೈಖರಿ ಕುರಿತಾಗಿ ಜನರ ಅಭಿಮತ, ವಿವಿಧ ವಿಷಯಗಳ ಬಗ್ಗೆ ಜನರ ಮೂಡ್ ತಿಳಿಯುವ ಪ್ರಯತ್ನವನ್ನು ಈ ಸಮೀಕ್ಷೆ ಮೂಲಕ ನಡೆಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಭಾರತ ಸಾಧಿಸಿದ ಪ್ರಗತಿಯ ಬಗ್ಗೆ ನಿಮಗೆ ಏನು ಅನಿಸುತ್ತದೆ ಎಂಬುದನ್ನು ‘ನಮೋ’ ಆಪ್ ನಲ್ಲಿ ಜನ ಮನ ಸಮೀಕ್ಷೆ ಮೂಲಕ ಪ್ರತಿಕ್ರಿಯೆ ಹಂಚಿಕೊಳ್ಳಿ ಎಂದು ತಿಳಿಸಿದ್ದಾರೆ.