ನವದೆಹಲಿ: ಭಾನುವಾರ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಬುಲೆಟ್ ರೈಲು ಸೇವೆಗಳನ್ನು ವಿಸ್ತರಿಸುವುದಾಗಿ ಭರವಸೆ ನೀಡಿದ್ದಾರೆ.
ಉತ್ತರ, ದಕ್ಷಿಣ ಮತ್ತು ಪೂರ್ವ ಭಾರತವನ್ನು ಸಂಪರ್ಕಿಸುವ ಮೂರು ಹೊಸ ರೈಲು ಕಾರಿಡಾರ್‌ಗಳನ್ನು ಸೇರಿಸಲಾಗುವುದು. ಕಾರಿಡಾರ್‌ಗಳ ಸಮೀಕ್ಷೆ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
ಬಿಜೆಪಿಯು ದೇಶದ ಮೂಲೆ ಮೂಲೆಗೂ ವಂದೇ ಭಾರತ್ ರೈಲುಗಳನ್ನು ವಿಸ್ತರಿಸಲಿದೆ. ವಂದೇ ಭಾರತ್‌ನ 3 ಮಾದರಿಗಳು ದೇಶದಲ್ಲಿ ಓಡಲಿವೆ. ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್ ಕಾರ್ ಮತ್ತು ವಂದೇ ಭಾರತ್ ಮೆಟ್ರೋ. ಇಂದು ಅಹಮದಾಬಾದ್ ಮುಂಬೈ ಬುಲೆಟ್ ಟ್ರೈನ್ ಕಾಮಗಾರಿ ನಡೆಯುತ್ತಿದೆ. ಅದೇ ರೀತಿ ಉತ್ತರ ಭಾರತದಲ್ಲಿ ಒಂದು ಬುಲೆಟ್ ರೈಲು, ದಕ್ಷಿಣ ಭಾರತದಲ್ಲಿ ಒಂದು ಬುಲೆಟ್ ರೈಲು ಮತ್ತು ಪೂರ್ವ ಭಾರತದಲ್ಲಿ ಒಂದು ಬುಲೆಟ್ ರೈಲು ಓಡಿಸಲಾಗುವುದು ಎಂದು ಅವರು ಹೇಳಿದ್ದಾರೆ.