
ನವದೆಹಲಿ: ಬ್ರಿಟನ್ ರಾಣಿ ಎರಡನೇ ಎಲಿಜಬೆತ್(96) ಗುರುವಾರ ರಾತ್ರಿ ನಿಧನರಾಗಿದ್ದಾರೆ. ಬ್ರಿಟನ್ ಇತಿಹಾಸದಲ್ಲಿಯೇ ಅವರು ಸುಧೀರ್ಘಕಾಲ ರಾಣಿಯಾಗಿದ್ದರು.
ಬಂಕಿಂಗ್ ಹ್ಯಾಮ್ ಅರಮನೆಯಿಂದ ಹೇಳಿಕೆ ಬಿಡುಗಡೆ ಮಾಡಿದ್ದು, ಮೃತರ ಗೌರವಾರ್ಥ 10 ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಹಿರಿಯ ಮಗ ವೇಲ್ಸ್ ರಾಜಕುಮಾರ 73 ವರ್ಷದ ಚಾರ್ಲ್ಸ್ ರಾಜನಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ರಾಣಿ ಎಲಿಜಬೆತ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ರಾಣಿ ಎಲಿಜಬೆತ್ ಅವರು ಧೀಮಂತ ಮಹಿಳೆಯಾಗಿದ್ದರು. ಬ್ರಿಟನ್ ಜನರಿಗೆ ಸ್ಪೂರ್ತಿದಾಯಕ ನಾಯಕತ್ವ ನೀಡಿದ್ದರು ಎಂದು ಸ್ಮರಿಸಿದ್ದಾರೆ.