ಕೊನೆ ಹಂತದ ಚುನಾವಣೆಗೆ ಎಂಟ್ರಿ ಕೊಡುತ್ತಿರುವ ಉತ್ತರಪ್ರದೇಶದಲ್ಲಿ ಮೋದಿ ಶುಕ್ರವಾರದಂದು ಅತಿದೊಡ್ಡ ರ್ಯಾಲಿ ನಡೆಸಿದ್ದಾರೆ. ರ್ಯಾಲಿ ಮುಗಿದ ನಂತರ ಪ್ರಧಾನಿಯವರು ವಾರಣಾಸಿ ರೈಲ್ವೇ ನಿಲ್ದಾಣಕ್ಕೆ ದಿಢೀರ್ ಭೇಟಿ ಕೊಟ್ಟು, ಅಲ್ಲಿದ್ದವರೊಂದಿಗೆ ಮಾತನಾಡಿರುವುದು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ವಾರಾಣಾಸಿ ಪ್ರಧಾನಿ ಮೋದಿ ಅವರ ಲೋಕಸಭಾ ಕ್ಷೇತ್ರ ಎನ್ನುವುದು ಗಮನಾರ್ಹ. ಅಲ್ಲಿನ ರೈಲ್ವೇ ನಿಲ್ದಾಣಕ್ಕೆ ಸರ್ಪ್ರೈಸ್ ವಿಸಿಟ್ ಕೊಟ್ಟ ಅವರು ಪ್ರಯಾಣಿಕರು ಹಾಗೂ ವ್ಯಾಪಾರಿಗಳೊಂದಿಗೆ ಮಾತನಾಡಿದ್ದಾರೆ. ಈ ವಿಡಿಯೋವನ್ನು ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲೂ ಹಂಚಿಕೊಳ್ಳಲಾಗಿದೆ. ಕೇಸರಿ ಶಾಲ್ ಧರಿಸಿರುವ ಅವರು, ನಿಪ್ದಾಣದಲ್ಲಿದ್ದ ವ್ಯಾಪಾರಿಗಳೊಂದಿಗೆ ಮಾತನಾಡಿದ್ದಾರೆ.
ಪುತ್ರನಿಗಾಗಿ 1400 ಕಿಮೀ ಸ್ಕೂಟಿ ರೈಡ್ ಮಾಡಿದ್ದ ತಾಯಿಗೆ ಇದೀಗ ಮತ್ತೊಂದು ಸಂಕಷ್ಟ..!
ಪ್ರಧಾನಿ ಮೋದಿ ಮಾರ್ಚ್ ಏಳನೇ ತಾರೀಖಿನಂದು ನಡೆಯಲಿರುವ ಅಂತಿಮ ಹಂತದ ಚುನಾವಣೆಗಾಗಿ ಭರ್ಜರಿ ಪ್ರಚಾರ ನಡೆಸಿದ್ರು. ರ್ಯಾಲಿ ನಂತರ ಟೀ ಸ್ಟಾಲ್ ಒಂದರಬಳಿ, ಬಿಸಿ ಬಿಸಿ ಚಹಾ ಸವಿದ ಅವರು ಸ್ಥಳೀಯರೊಂದಿಗೆ ಸಹಜವಾಗಿ ಬೆರೆತರು. ಸಂಜೆ ಕಾಶಿ ವಿಶ್ವನಾಥ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಡಮರು ಬಾರಿಸಿದರು. ಈ ಎಲ್ಲಾ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
https://twitter.com/ANINewsUP/status/1499941154120351744?ref_src=twsrc%5Etfw%7Ctwcamp%5Etweetembed%7Ctwterm%5E1499941154120351744%7Ctwgr%5E%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiaenglish-epaper-india%2Faftersippingkulladchaipmmodimakessurprisevisittovaranasirailwaystationwatch-newsid-n365131498%3Fs%3Dauu%3D0xb376f4ef2ad749c2ss%3Dwsp