ಮೈಸೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದೇಶದ ಮತದಾರರು ಜಾತಿವಾದ, ಕೋಮುವಾದದ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಉದ್ಯಮಿ ಕ್ಯಾ.ಜಿ.ಆರ್. ಗೋಪಿನಾಥ್ ಹೇಳಿದ್ದಾರೆ.
ಮೈಸೂರು ಓಪನ್ ಫೋರಂ ಸಂಘಟನೆ ವತಿಯಿಂದ ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ನಮ್ಮ ಕಾಲದ ಪ್ರಮುಖ ಕಾಳಜಿಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ದೇಶದ ಮತದಾರರಿಂದ ಜೈ ಹನುಮಾನ್ ಎಂದು ಘೋಷಣೆ ಕೂಗಿದವರು ಮತ್ತು ರಾಮ ಮಂದಿರ ನಿರ್ಮಿಸಿದವರಿಗೆ ಮತ ಚಲಾವಣೆ ಆಗಿಲ್ಲ. ದೇಶದಲ್ಲಿ ಹಬ್ಬಿರುವ ಹಸಿವಿನ ಪರವಾಗಿ ಜನ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಸರ್ವಾಧಿಕಾರಿ ಅಲ್ಲದಿರಬಹುದು, ಆದರೆ, ಪ್ರಜಾಪ್ರಭುತ್ವವಾದಿಯಂತೂ ಅಲ್ಲ. ಹಿಂದುತ್ವಕ್ಕಿಂತ ಅಧಿಕಾರ ಮುಖ್ಯವೆಂಬುದು ಪ್ರಧಾನಿ ಮೋದಿ ಅವರಿಗೆ ಮನವರಿಕೆಯಾಗಿದೆ. ಬಿಜೆಪಿಗಿಂತ ಪ್ರಬಲವಾಗಿ ಹಿಂದುತ್ವ ಪ್ರತಿಪಾದಿಸಿದ ಶಿವಸೇನೆ ಈಗ ಕಾಂಗ್ರೆಸ್, ಎನ್.ಸಿ.ಪಿ. ಜೊತೆ ಸೇರಿಕೊಂಡಿರುವ ಉದಾಹರಣೆ ಅವರ ಮುಂದೆ ಇದೆ. ಪ್ರಸ್ತುತ ಸಾಮಾಜಿಕ ಸಹಿಷ್ಣತೆ ಹೆಚ್ಚಾಗಿದೆ. ಇನ್ನಾದರೂ ನಾವೆಲ್ಲರೂ ಸಹಿಷ್ಣುತೆ ಬೆಳೆಸಿಕೊಳ್ಳಬೇಕಿದೆ ಎಂದು ಗೋಪಿನಾಥ್ ಹೇಳಿದ್ದಾರೆ.