ಬೆಂಗಳೂರು : ಪ್ರಧಾನಿ ಮೋದಿ ಜೀವಮಾನದಲ್ಲೇ ಸತ್ಯ ಹೇಳಿದವರಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಹೇಳುವ ಕಟ್ಟು ಕಥೆಗಳನ್ನು ನಂಬದಿರಿ. ಅವರು ತಮ್ಮ ಜೀವಮಾನದಲ್ಲೇ ಸತ್ಯ ಹೇಳಿದವರಲ್ಲ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
NCRB ವರದಿಯ ಪ್ರಕಾರ ಬಿಜೆಪಿ ಅಧಿಕಾರಕ್ಕೇರಿದ ನಂತರ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.42.96 ರಷ್ಟು ಹೆಚ್ಚಾಗಿವೆ ಎಂದು ಕಿಡಿಕಾರಿದ್ದಾರೆ.
ಸಂವಿಧಾನ ಹೋದರೆ ಬಡವರಿಗೆ ಹಕ್ಕುಗಳು, ಶೋಷಿತರಿಗೆ ಮೀಸಲಾತಿ ಇಲ್ಲವಾಗುತ್ತದೆ
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಪ್ರಜಾಪ್ರಭುತ್ವ ಉಳಿಸಿ ಮಾತನಾಡಿದ ರಾಹುಲ್ ಗಾಂಧಿ ಬಿಜೆಪಿಯ ಸಂಸದರೊಬ್ಬರು ಈ ಚುನಾವಣೆಯಲ್ಲಿ ನಾವು 400 ಸ್ಥಾನ ಗೆಲ್ಲುತ್ತೇವೆ, ಆ ನಂತರ ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದಾರೆ. ಇದು ಜನರ ಪ್ರತಿಕ್ರಿಯೆಯನ್ನು ಪರೀಕ್ಷೆ ಮಾಡುವುದಕ್ಕಾಗಿ ಹೇಳಿಸಿದ್ದು. ಸಂವಿಧಾನ ಹೋದರೆ ಬಡವರಿಗೆ ಹಕ್ಕುಗಳು, ಶೋಷಿತರಿಗೆ ಮೀಸಲಾತಿ ಇಲ್ಲವಾಗುತ್ತದೆ. ದೇಶದ ಸಂಪತ್ತೆಲ್ಲಾ ನಾಲ್ಕಾರು ಮಂದಿ ಬಂಡವಾಳಶಾಹಿಗಳ ಕೈಸೇರುತ್ತದೆ.