ಮಡಿಕೇರಿ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನವಾದ ಮಂಗಳವಾರ ಸೆ. 17ರಂದು ಮಡಿಕೇರಿಯಲ್ಲಿ ಜನಿಸಿದ ಗಂಡು ಮಗುವಿಗೆ ಪೋಷಕರು ನರೇಂದ್ರ ಮೋದಿ ಎಂದು ನಾಮಕರಣ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂದರ ನಗರದ ಮಹೇಂದ್ರ -ಜಯಲಕ್ಷ್ಮಿ ದಂಪತಿಗೆ ಮಂಗಳವಾರ ಗಂಡು ಮಗು ಜನಿಸಿದೆ. ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ದಂಪತಿ ಮಗುವಿಗೆ ನರೇಂದ್ರ ಮೋದಿ ಎಂದು ನಾಮಕರಣ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತರಾಗಿರುವ ಮಹೇಂದ್ರ ಅವರು ಪ್ರಧಾನಿ ಮೋದಿ ಅಭಿಮಾನಿಯಾಗಿದ್ದಾರೆ. ಹೀಗಾಗಿ ತಮ್ಮ ಮಗುವಿಗೆ ಮೋದಿ ಹೆಸರಿಟ್ಟಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಪಕ್ಷದ ಮುಖಂಡರು ಉಡುಗೊರೆಯಾಗಿ ಚಿನ್ನದ ಉಂಗುರ ನೀಡಿ ಶುಭ ಹಾರೈಸಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ವಕ್ತಾರ ಮಹೇಶ್ ಜೈನಿ ಮೊದಲಾದವರು ಇದ್ದರು. ಮಹೇಂದ್ರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.