alex Certify ಪರೀಕ್ಷೆ ಎದುರಿಸುತ್ತಿದ್ದಾರಾ ಮೋದಿ – ಧೋನಿ ? ಅಡ್ಮಿಟ್​ ಕಾರ್ಡ್​ಗಳು ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರೀಕ್ಷೆ ಎದುರಿಸುತ್ತಿದ್ದಾರಾ ಮೋದಿ – ಧೋನಿ ? ಅಡ್ಮಿಟ್​ ಕಾರ್ಡ್​ಗಳು ವೈರಲ್​

ಬಿಹಾರದ ದರ್ಭಾಂಗದಲ್ಲಿರುವ ಲಲಿತ್​ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದ ವಾರ್ಷಿಕ ಪರೀಕ್ಷೆಗಳ ಪ್ರವೇಶ ಪತ್ರಗಳಲ್ಲಿ ನಿಜವಾದ ವಿದ್ಯಾರ್ಥಿಗಳ ಬದಲಿಗೆ ಪ್ರಧಾನಿ ನರೇಂದ್ರ ಮೋದಿ, ಬಿಹಾರ ರಾಜ್ಯಪಾಲ ಫಗು ಚೌಹಾಣ್​, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಕ್ರಿಕೆಟ್​ ತಾರೆ ಮಹೇಂದ್ರ ಸಿಂಗ್​ ಧೋನಿ ಅವರ ಚಿತ್ರಗಳು ಕಂಡುಬಂದಿವೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್​ನಲ್ಲಿ ಜನಪ್ರಿಯ ವ್ಯಕ್ತಿಗಳ ಚಿತ್ರಗಳಿರುವ ಅಡ್ಮಿಟ್​ ಕಾರ್ಡ್​ನ್ನು ಕಾಲೇಜು ವಿತರಿಸಿರುವುದು ಬಹಿರಂಗವಾಗಿದೆ.

ಮಧುಬನಿ, ಸಮಸ್ತಿಪುರ್​ ಮತ್ತು ಬೇಗುಸರಾಯ್​ ಜಿಲ್ಲೆಗಳಲ್ಲಿರುವ ಕಾಲೇಜುಗಳಲ್ಲಿ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳು ಚಿತ್ರಗಳನ್ನು ಅಪ್​ಲೋಡ್​ ಮಾಡಿದ ಪರೀಕ್ಷಾರ್ಥಿಗಳಾಗಿದ್ದಾರೆ. ಎಲ್ಲರೂ ದರ್ಬಂಗಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಲಲಿತ್​ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯಕ್ಕೆ ಸಂಯೋಜನಗೊಂಡ ಕಾಲೇಜಿನ ವಿದ್ಯಾರ್ಥಿಗಳು.

ಈಗ ಬೆಳಕಿಗೆ ಬಂದಿರುವ ಅವ್ಯವಹಾರಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ, ತನಿಖೆಗೆ ಆದೇಶಿಸಲಾಗಿದ್ದು, ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಶೋಕಾಸ್​ ನೋಟಿಸ್​ ಜಾರಿ ಮಾಡಲಾಗಿದೆ. ಎಫ್​ಐಆರ್​ ಕೂಡ ದಾಖಲಾಗಬಹುದು ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್​ ಮುಷ್ತಾಕ್​ ಅಹ್ಮದ್​ ಹೇಳಿದ್ದಾರೆ.

ಪ್ರವೇಶ ಕಾರ್ಡ್​ಗಳನ್ನು ಆನ್​ಲೈನ್​ನಲ್ಲಿ ನೀಡಲಾಗಿದ್ದು, ಆಯಾ ವಿದ್ಯಾರ್ಥಿಗಳು ಡೌನ್​ಲೋಡ್​ ಮಾಡಲು ಬೇರೆ ಬೇರೆ ಲಾಗಿನ್​ ವಿವರಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಅಡ್ಮಿಟ್​ ಕಾರ್ಡ್​ಗಳನ್ನು ತಯಾರಿಸಲು ನಮ್ಮ ಡೇಟಾ ಸೆಂಟರ್​ನಿಂದ ರೂಪಿಸಿದ ವೇದಿಕೆಯಲ್ಲಿ ಫೋಟೋ ಮತ್ತು ಇತರ ವಿವರಗಳನ್ನು ವಿದ್ಯಾರ್ಥಿಗಳು ಅಪ್​ಲೋಡ್​ ಮಾಡಬೇಕಿತ್ತು. ಕೆಲವರು ಬೇಜವಾಬ್ದಾರಿಯಿಂದ ಕಿಡಿಗೇಡಿತನ ತೋರಿದ್ದಾರೆ ಎಂದು ರಿಜಿಸ್ಟ್ರಾರ್​ ಮಾಹಿತಿ ನೀಡಿದ್ದಾರೆ.

ತನಿಖೆಯ ನಂತರ ಕ್ರಮ ಕೆೈಗೊಳ್ಳಲಾಗುವುದು. ಇದು ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ತರುತ್ತದೆ. ಪ್ರಧಾನಿ ಮತ್ತು ರಾಜ್ಯಪಾಲರ ಛಾಯಾಚಿತ್ರಗಳ ದುರುಪಯೋಗ ಕೂಡ ಗಂಭೀರ ವಿಷಯವಾಗಿದೆ ಎಂದು ಅವರು ಹೇಳಿದರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...