alex Certify ಶತಮಾನದ ದೀಪ ದೇವರ ಪಾದ ಸೇರಿದೆ: ತಾಯಿ ಹೀರಾ ಬೆನ್ ನಿಧನಕ್ಕೆ ಪ್ರಧಾನಿ ಮೋದಿ ಕಂಬನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶತಮಾನದ ದೀಪ ದೇವರ ಪಾದ ಸೇರಿದೆ: ತಾಯಿ ಹೀರಾ ಬೆನ್ ನಿಧನಕ್ಕೆ ಪ್ರಧಾನಿ ಮೋದಿ ಕಂಬನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್(100) ನಿಧನರಾಗಿದ್ದಾರೆ. ಟ್ವೀಟ್ ಮೂಲಕ ಮೋದಿ ಸಂತಾಪ ಸೂಚಿಸಿದ್ದಾರೆ.

ಶತಮಾನದ ದೀಪ ಪರಮಾತ್ಮನ ಪಾದಕ್ಕೆ ಶರಣಾಗಿದೆ. ನನ್ನ ತಾಯಿಯಲ್ಲಿ ಮೂರು ಗುಣಗಳನ್ನು ಕಂಡಿದ್ದೇನೆ. ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮ ಯೋಗಿ ಅವರಾಗಿದ್ದರು. ಮೌಲ್ಯಗಳಿಗೆ ಬದ್ಧವಾದ ಜೀವನ ನಡೆಸಿದರು ಎಂದು ಮೋದಿ ಸಂತಾಪ ಸೂಚಿಸಿದ್ದಾರೆ.

ಅವರ 100 ನೇ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದಾಗ, ಬದ್ಧತೆ, ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಶುದ್ಧತೆಯಿಂದ ಜೀವನ ಮಾಡಿ ಎಂದು ಹೇಳಿದ್ದರು ಎಂದು ಸ್ಮರಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...