ನವದೆಹಲಿ: ದೇಶದಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲ ತುಂಬಲು ಪ್ರಧಾನಿ ಮೋದಿ ಮುಂದಾಗಿದ್ದು, ವೈದ್ಯ ಸಿಬ್ಬಂದಿ ಕೊರತೆ ತುಂಬಲು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಸೇವೆಗೆ ಬಳಸಿಕೊಳ್ಳಲಾಗುತ್ತದೆ.
ಕೆಲಸಕ್ಕೆ ಬಂದವರಿಗೆ ಸರ್ಕಾರಿ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು. ಅದೇ ರೀತಿ ನರ್ಸಿಂಗ್ ಕೋರ್ಸ್ ಪಾಸ್ ಆದವರನ್ನು ರೋಗಿಗಳ ಸೇವೆಗೆ ಬಳಕೆ ಮಾಡಿಕೊಳ್ಳಲಾಗುವುದು. ಎಂಬಿಬಿಎಸ್, ನರ್ಸಿಂಗ್ ಕೋರ್ಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ಸೇವೆಯನ್ನು ಕೋವಿಡ್ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಲಾಗುತ್ತದೆ.
ಎಂಬಿಬಿಎಸ್ ಪಾಸಾದ ಅಭ್ಯರ್ಥಿಗಳನ್ನು ಕೂಡ ಕೋವಿಡ್ ಸೇವೆಗೆ ಬಳಸಿಕೊಳ್ಳಲಾಗುವುದು. ಕೋವಿಡ್ ಸೇವೆಗೆ ಬಂದವರಿಗೆ ಹಣಕಾಸಿನ ನೆರವು, ಉದ್ಯೋಗ ನೇಮಕಾತಿ ವೇಳೆ ಆದ್ಯತೆ ನೀಡಲಾಗುತ್ತದೆ. ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇಂದು ಅಧಿಸೂಚನೆ ಹೊರಡಿಸಲಾಗುವುದು.