
ನವದೆಹಲಿ: ಈ ವರ್ಷದ ಮೊದಲ ‘ಮನ್ ಕಿ ಬಾತ್’ನಲ್ಲಿ ಇಂದು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ಜನವರಿಯ ಕೊನೆಯ ದಿನವಾಗಿದೆ. 2021 ರ ಮೊದಲ ತಿಂಗಳು ಮುಕ್ತಾಯವಾಗಿದೆ. ಈ ತಿಂಗಳಲ್ಲಿ ಹಲವು ಹಬ್ಬ ಆಚರಿಸಿದ್ದೇವೆ ಎಂದು ಹೇಳಿದ್ದಾರೆ.
ಗಣ ರಾಜ್ಯೋತ್ಸವ ಆಚರಿಸಿ ಸಂಭ್ರಮಿಸಿದ್ದೇವೆ. ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಗೆಲುವು ಸಾಧಿಸಿದೆ. ಇದು ಟೀಂ ಇಂಡಿಯಾ ಆಟಗಾರರ ವಿಶ್ವಾಸ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ. ಈ ಬಾರಿ ಹಲವರಿಗೆ ಪದ್ಮ ಪುರಸ್ಕಾರ ನೀಡಲಾಗಿದೆ. ಹಲವು ಕ್ಷೇತ್ರಗಳ ಜನರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಸಮಾಜಸೇವೆ ಮಾಡುವ ಎಲೆಮರೆ ಕಾಯಿಗಳನ್ನು ಆಯ್ಕೆ ಮಾಡಿ ಗೌರವಿಸಲಾಗಿದೆ ಎಂದು ಹೇಳಿದ್ದಾರೆ.
ಕೊರೊನಾ ವಿರುದ್ಧ ವಿಶ್ವಾಸ ಮತ್ತು ಒಗ್ಗಟ್ಟಿನಿಂದ ಹೋರಾಟ ನಡೆಸಲಾಗಿದೆ. ಕೊರೋನಾ ತಡೆಯುವಲ್ಲಿ ದೇಶದ ಜನರ ಪಾತ್ರ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.