ನವದೆಹಲಿ: ಕೊರೋನಾ ದಿನೇದಿನೇ ವೇಗವಾಗಿ ಹರಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಮನ್ ಕಿ ಬಾತ್’ ನಲ್ಲಿ ಇಂದು ಮಾತನಾಡಿದ ಅವರು, ವೇಗವಾಗಿ ಹರಡಿಷ್ಟು ವೇಗವಾಗಿ ಕಡಿಮೆಯಾಗುತ್ತಿದೆ. ಮಕ್ಕಳು ಯುವಕರಲ್ಲಿ ಕೊರೋನಾ ಹರಡುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ತಜ್ಞರ ಜೊತೆಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಕೊರೊನಾ ವಿರುದ್ಧ ಹೆಲ್ತ್ ವರ್ಕರ್ಸ್ ಹೋರಾಟ ನಡೆಸಿದ್ದಾರೆ. ಕೊರೋನಾಗೆ ಮೂರು ಮಾದರಿಯಲ್ಲಿ ಚಿಕಿತ್ಸೆ ನೀಡುವುದಾಗಿ ತಜ್ಞರು ಹೇಳಿದ್ದಾರೆ. ಒಂದು ಸಾಮಾನ್ಯ ಕೊರೋನಾದಿಂದ ಆಕ್ಸಿಜನ್ ಏರುಪೇರಾಗುತ್ತದೆ. ಮಧ್ಯಮ ಕೊರೋನಾಗೆ ಸ್ಟಿರಾಯಿಡ್ ಬಳಸಲಾಗುತ್ತದೆ. ಅಗತ್ಯವಾದ ಆಕ್ಸಿಜನ್ ನೀಡಬೇಕಿದೆ. ನಮ್ಮ ಅಮೂಲ್ಯವಾದ ಸಮಯವನ್ನು ಕೊರೋನಾ ಕಸಿಯುತ್ತಿದೆ. ದೇಶ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿತ್ತು. ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಚರ್ಚೆ ನಡೆಸಿದ್ದೇನೆ. ಕೊರೋನಾ ವಿರುದ್ಧದ ಹೋರಾಟ ಗೆಲ್ಲಬೇಕಿದೆ. ರಾಜ್ಯ ಸರ್ಕಾರಗಳ ಜೊತೆಗೆ ಕೇಂದ್ರ ಸರ್ಕಾರ ಕೈಜೋಡಿಸಿದೆ ಎಂದು ‘ಮನ್ ಕಿ ಬಾತ್’ ನಲ್ಲಿ ಮೋದಿ ಹೇಳಿದ್ದಾರೆ.