ನವದೆಹಲಿ: ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ನಿಂದ ಸುಮಾರು 31 ಕೋಟಿ ರೂಪಾಯಿ ಆದಾಯ ಬಂದಿದೆ.
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಗೆ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ಪ್ರತಿ ತಿಂಗಳ ಕೊನೆಯ ಭಾನುವಾರ ಬೆಳಗ್ಗೆ 11 ಗಂಟೆಗೆ ‘ಮನ್ ಕಿ ಬಾತ್’ ಕಾರ್ಯಕ್ರಮ ಪ್ರಸಾರವಾಗಲಿದೆ. ಇದುವರೆಗೆ 78 ಎಪಿಸೋಡ್ ಗಳು ಪ್ರಸಾರವಾಗಿವೆ. 91 ಖಾಸಗಿ ಸ್ಯಾಟಲೈಟ್ ಟಿವಿ ಚಾನಲ್ ಗಳಲ್ಲಿಯೂ ‘ಮನ್ ಕಿ ಬಾತ್’ ಪ್ರಸಾರ ಮಾಡಲಾಗಿದೆ.
‘ಮನ್ ಕಿ ಬಾತ್’ ಕಾರ್ಯಕ್ರಮ ಇದುವರೆಗೆ 30.80 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದೆ. 2017 -18 ರಲ್ಲಿ ‘ಮನ್ ಕಿ ಬಾತ್’ ಕಾರ್ಯಕ್ರಮದ ಮೂಲಕ ಅತಿ ಹೆಚ್ಚು ಅಂದರೆ 10.64 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.