ನವದೆಹಲಿ: ಪ್ರಧಾನಿ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನೂತನ ಸಂಸತ್ ಭವನದ ಉದ್ಘಾಟನೆ ಪೂಜೆ ನೆರವೇರಿಸಿದ್ದಾರೆ.
ಸುಮಾರು ಒಂದು ಗಂಟೆ ಕಾಲ ಪೂಜೆ ಕಾರ್ಯಕ್ರಮ ಮುಂದುವರೆದು, ಪೂಜೆಯ ನಂತರ ಪ್ರಧಾನ ಮಂತ್ರಿಯವರು ‘ಸೆಂಗೊಲ್’ ಅನ್ನು ಹೊಸ ಸಂಸತ್ ನಲ್ಲಿ ಸ್ಥಾಪಿಸಿದ್ದಾರೆ.
ಶೃಂಗೇರಿ ಪುರೋಹಿತರಿಂದ ಸಂಸತ್ ಭವನದಲ್ಲಿ ಪೂಜ ಕೈಂಕರ್ಯ ನೆರವೇರಿಸಲಾಗಿದೆ. ಸೀತಾರಾಮ ಶರ್ಮ, ಶ್ರೀರಾಮ ಶರ್ಮ, ಲಕ್ಷ್ಮೀಶ ತಂತ್ರಿ ಅವರಿಂದ ಪೂಜೆ ಕಾರ್ಯಗಳನ್ನು ನೆರವೇರಿಸಲಾಗಿದೆ. ನೂತನ ಸಂಸತ್ ಭವನದಲ್ಲಿ ಹೋಮ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಾಗಿದೆ.
ನಂತರ ಪುರೋಹಿತರಿಂದ ಪ್ರಧಾನಿ ಸೆಂಗೋಲ್ ಸ್ವೀಕರಿಸಿದ್ದಾರೆ. ಹೊಸ ಸಂಸತ್ ಕಟ್ಟಡದಲ್ಲಿ ಸ್ಥಾಪಿಸುವ ಮೊದಲು ಪ್ರಧಾನಿ ಮೋದಿ ಅವರು ಅಧೀನಾಮ್‌ರಿಂದ ಐತಿಹಾಸಿಕ ‘ಸೆಂಗೊಲ್’ ಸ್ವೀಕರಿಸಿ ಅದನ್ನು ಸ್ಪೋಕರ್ ಆಸನದ ಬಳಿ ಪ್ರತಿಷ್ಠಾಪಿಸಿದ್ದಾರೆ.