alex Certify BIG NEWS: ಸುದೀರ್ಘ ಅವಧಿಗೆ ಅಡಳಿತ ನಡೆಸಿದ ಮೊದಲ ನಾಯಕ ಮೋದಿ ಅಧಿಕಾರಕ್ಕೇರಿ ಇಂದಿಗೆ 20 ವರ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸುದೀರ್ಘ ಅವಧಿಗೆ ಅಡಳಿತ ನಡೆಸಿದ ಮೊದಲ ನಾಯಕ ಮೋದಿ ಅಧಿಕಾರಕ್ಕೇರಿ ಇಂದಿಗೆ 20 ವರ್ಷ

ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಹುದ್ದೆ ಸೇರಿ ಸುದೀರ್ಘ 20 ವರ್ಷ ಅವಧಿಗೆ ಸಾಂವಿಧಾನಿಕ ಹುದ್ದೆಯಲ್ಲಿ ಅಧಿಕಾರ ನಡೆಸಿದ ದೇಶದ ಮೊದಲ ನಾಯಕ ಪ್ರಧಾನಿ ಮೋದಿ. ಇಷ್ಟೊಂದು ವರ್ಷಗಳ ಕಾಲ ನಿರಂತರವಾಗಿ ಅಧಿಕಾರದಲ್ಲಿರುವ ಮೋದಿ ಜನಪ್ರಿಯತೆ ಹೆಚ್ಚಿಸಿಕೊಳ್ಳುವ ಜೊತೆಗೆ ವಿಶ್ವದ ಅಗ್ರಗಣ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ.

ಅಂದ ಹಾಗೆ, ಅಕ್ಟೋಬರ್ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿ 20 ವರ್ಷ ಪೂರ್ಣಗೊಂಡಿದೆ. 13 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ ಅವರು ಆಡಳಿತ ನಡೆಸಿದ್ದು, 7 ವರ್ಷ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. 7306 ದಿನ ಅಧಿಕಾರ ನಡೆಸಿದ್ದಾರೆ. ಜಾಲತಾಣದಲ್ಲಿ ಮೋದಿಯವರಿಗೆ ಸುಮಾರು 18 ಕೋಟಿಗೂ ಅಧಿಕ ಫಾಲೋಯರ್ಸ್ ಗಳಿದ್ದಾರೆ. ಮೋದಿ ಅವಧಿಯಲ್ಲಿ ಬಿಜೆಪಿ 18 ರಾಜ್ಯಗಳಲ್ಲಿ ಜಯಗಳಿಸಿದ್ದು, ಸತತ ಎರಡನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದೆ.

ಜವಾಹರಲಾಲ್ ನೆಹರು ಅವರು 6130 ದಿನ ಆಡಳಿತ ನಡೆಸಿದ್ದಾರೆ. ಇಂದಿರಾಗಾಂಧಿ 5829, ಮನಮೋಹನಸಿಂಗ್ 3656, ಮುರಾರ್ಜಿ ದೇಸಾಯಿ 2511, ಎಬಿ ವಾಜಪೇಯಿ 2272, ನರಸಿಂಹರಾವ್ 2229, ರಾಜೀವ್ ಗಾಂಧಿ 1857, ಹೆಚ್.ಡಿ. ದೇವೇಗೌಡ 862, ಚರಣಸಿಂಗ್ 723 ದಿನ ಆಡಳಿತ ನಡೆಸಿದ್ದಾರೆ.

ಅತಿ ಹೆಚ್ಚು ಅವಧಿಗೆ ಪ್ರಧಾನಿ ಹುದ್ದೆಯಲ್ಲಿದ್ದವರ ಪಟ್ಟಿಯಲ್ಲಿ ನೆಹರು ಮೊದಲ ಸ್ಥಾನದಲ್ಲಿದ್ದಾರೆ. ಅವರು 6130 ದಿನ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಂದಿರಾಗಾಂಧಿ 5829, ಮನಮೋಹನಸಿಂಗ್ 3656 ದಿನ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದು, ಮೋದಿ 2691 ಮತ್ತು ವಾಜಪೇಯಿ 2272 ದಿನ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುಖ್ಯಮಂತ್ರಿಯಾಗಿ 4607 ದಿನ ಮತ್ತು ಪ್ರಧಾನಿಯಾಗಿ 2691 ದಿನ ಮೋದಿ ಆಡಳಿತ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...