ನವದೆಹಲಿ: ಭಾರತದಲ್ಲಿ ಮತ್ತೊಂದು ಡಿಜಿಟಲ್ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದೇಶದಲ್ಲಿ ಇಂದಿನಿಂದ ಹೈಸ್ಪೀಡ್ ಇಂಟರ್ ನೆಟ್ ಸೇವೆ 5ಜಿ ಸೇವೆಗೆ ಚಾಲನೆ ದೊರೆತಿದೆ.
ನವದೆಹಲಿಯ ಪ್ರಗತಿ ಮೈದಾನದಲ್ಲಿ ಪ್ರಧಾನಿ ಮೋದಿ 5G ಸೇವೆಗೆ ಚಾಲನೆ ನೀಡಿದರು. ಜಿಯೋ, ಏರ್ ಟೆಲ್ ಹಾಗೂ ವಾಡಾಫೋನ್ ಈ ಮೂರು ಕಂಪನಿಗಳಿಂದ 5Gಸೇವೆ ಆರಂಭವಾಗಿದೆ. ಆಯ್ದ ಮೆಟ್ರೋ ನಗರಗಳಲ್ಲಿ ಈ ಸೇವೆ ಆರಂಭವಾಗಲಿದ್ದು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿಯೂ 5G ದೊರಕಲಿದೆ.
ಮೊದಲ ಹಂತದಲ್ಲಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗುತ್ತಿದೆ. ಬೆಂಗಳೂರು, ಅಹಮದಾಬಾದ್, ಛಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುಗ್ರಾಮ್ ಹೈದರಾಬಾದ್, , ಜಾಮ್ ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಹಾಗೂ ಪುಣೆ ನಗರಗಳಲ್ಲಿ ಆರಂಭವಾಗುತ್ತಿದೆ.