ನವದೆಹಲಿ: ಕಾಂಗ್ರೆಸ್ ಪ್ರತ್ಯೇಕ ರಾಷ್ಟ್ರ ಮಾಡಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ‘ವಂದನಾ ನಿರ್ಣಯ’ಕ್ಕೆ ಉತ್ತರಿಸಿದ ಮೋದಿ, ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಪ್ರತ್ಯೇಕ ರಾಷ್ಟ್ರ ಮಾತಿಗೆ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪ್ರತ್ಯೇಕ ರಾಷ್ಟ್ರ ಮಾಡಲು ಹೊರಟಿದೆ. ದೇಶವನ್ನು ಇನ್ನೂ ಎಷ್ಟು ತುಂಡು ಮಾಡಬೇಕು ಎಂದುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲಿ ಡಿ.ಕೆ. ಸುರೇಶ್ ಹೇಳಿಕೆ ಪ್ರಸ್ತಾಪಿಸಿದ ಮೋದಿ, ಕಾಂಗ್ರೆಸ್ ನವರು ದೇಶವನ್ನು ಎಂದೂ ಕೂಡ ಜೋಡಿಸಿಲ್ಲ. ಒಗ್ಗೂಡಿಸುವುದು ಇರಲಿ ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ದೇಶ ವಿಭಜನೆ ಮಾಡುವ ನಾಯಕರಿಗೆ ನಾಚಿಕೆಯಾಗುವುದಿಲ್ಲವೇ? ದೇಶವನ್ನು ಇನ್ನೆಷ್ಟು ಬಾರಿ ವಿಭಜಿಸಬೇಕು ಎಂದುಕೊಂಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ನವರು ಯಾವತ್ತೂ ದೇಶವನ್ನು ಜೋಡಿಸಿಲ್ಲ. ಬಹಿರಂಗವಾಗಿಯೇ ದೇಶ ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಒಗ್ಗೂಡಿಸುವುದು ಇರಲಿ ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ದೇಶವನ್ನು ಇನ್ನೆಷ್ಟು ತುಂಡು ಮಾಡಬೇಕು ಅಂದುಕೊಂಡಿದ್ದೀರಿ? ಇಷ್ಟು ಒಡೆದಿರುವುದು ಸಾಕಾಗಿಲ್ಲವೇ? ಇನ್ನೆಷ್ಟು ಭಾಗವಾಗಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.