ಸೈನಿಕರನ್ನು ಭೇಟಿ ಮಾಡುವಾಗ ಪ್ರಧಾನಿ ಮೋದಿ ಸೇನಾ ಸಮವಸ್ತ್ರ ಧರಿಸಿದ್ದ ಬಗ್ಗೆ ಜಿಲ್ಲಾ ನ್ಯಾಯಾಲಯ ಪ್ರಧಾನಿ ಕಚೇರಿಗೆ ನೋಟೀಸ್ ಕಳುಹಿಸಿದೆ.
ಪ್ರಧಾನಿ ಸಮವಸ್ತ್ರ ಧರಿಸಿದ್ದ ಬಗ್ಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 140 ರ ಅಡಿಯಲ್ಲಿ ಸೈನಿಕರು, ನಾವಿಕರು, ಏರ್‌ಮ್ಯಾನ್ ಧರಿಸುವ ಅಥವಾ ಬಳಸಿರುವ ವಸ್ತ್ರಗಳನ್ನು ಧರಿಸುವುದು ಅಥವಾ ಟೋಕನ್ ಅನ್ನು ಒಯ್ಯುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಪಕ್ಷಕ್ಕಾಗಿ ಸಾರ್ವಜನಿಕರಿಂದ ಮತ್ತೆ ದೇಣಿಗೆ ಸ್ವೀಕರಿಸಲು ಮುಂದಾದ ಕಮಲ್ ಹಾಸನ್
ಕಳೆದ ವರ್ಷ ಪ್ರಧಾನಿ ಮೋದಿ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಭಾರತೀಯ ಸೇನಾ ಸಮವಸ್ತ್ರ ಧರಿಸಿ ಸೈನಿಕರನ್ನ ಭೇಟಿ ಮಾಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಜಿಲ್ಲಾ ಕೋರ್ಟ್, ಪ್ರಧಾನಿ ಕಚೇರಿಗೆ ನೋಟೀಸ್ ಕಳುಹಿಸಿದೆ.