ಬರ್ಲಿನ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಬರ್ಲಿನ್‌ನಲ್ಲಿ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿದರು. ಇದಕ್ಕೂ ಮುನ್ನ ಫೆಡರಲ್ ಚಾನ್ಸೆಲರಿಯಲ್ಲಿ ಮೋದಿಯವರಿಗೆ ವಿಧ್ಯುಕ್ತ ಸ್ವಾಗತ ನೀಡಲಾಯಿತು.
ಮೂರು ಯುರೋಪಿಯನ್ ರಾಷ್ಟ್ರಗಳಿಗೆ ತಮ್ಮ ಅಧಿಕೃತ ಭೇಟಿಯ ಮೊದಲ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿಯ ರಾಜಧಾನಿ ಬರ್ಲಿನ್ ಗೆ ತಲುಪಿದರು. ಆಗಮನದ ವೇಳೆ ಅವರಿಗೆ ಭಾರತೀಯರಿಂದ ಆತ್ಮೀಯ ಸ್ವಾಗತ ದೊರೆಯಿತು.
ಜರ್ಮನಿ ಪ್ರವಾಸವನ್ನು ಪೂರ್ಣಗೊಳಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರ ಆಹ್ವಾನದ ಮೇರೆಗೆ ಅಧಿಕೃತ ಭೇಟಿಗಾಗಿ ನಾಳೆ ಕೋಪನ್ ಹ್ಯಾಗನ್ ಗೆ ತೆರಳಲಿದ್ದಾರೆ. ಇದು ಡೆನ್ಮಾರ್ಕ್ ಗೆ ಅವರ ಮೊದಲ ಭೇಟಿಯಾಗಿದೆ.
ಪ್ರವಾಸದ ಕೊನೆಯ ಹಂತದಲ್ಲಿ, ಪ್ರಧಾನಿ ಪ್ಯಾರಿಸ್ ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡುತ್ತಾರೆ.