ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿ ಈ ಏಳು ವರ್ಷಗಳಲ್ಲಿ ಹೇಗೆ 1 ದಿನವೂ ರಜೆಯನ್ನು ತೆಗೆದುಕೊಂಡಿಲ್ಲವೋ ಅದೇ ರೀತಿ ಉತ್ತರ ಪ್ರದೇಶ ಸಿಎಂ ಆಗಿರುವ ಯೋಗಿ ಆದಿತ್ಯನಾಥ್ ಕಳೆದ 4 ವರ್ಷಗಳಲ್ಲಿ ಒಂದು ದಿನವೂ ಕೆಲಸಕ್ಕೆ ರಜೆ ಪಡೆದಿಲ್ಲ ಎಂಬ ಅಚ್ಚರಿಯ ವಿಚಾರವನ್ನು ಗ್ರೇಟರ್ ನೋಯ್ಡಾದಲ್ಲಿ ನಡೆದ ಪ್ರಬುದ್ಧ ಸಮ್ಮೇಳನದಲ್ಲಿ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ 7 ವರ್ಷಗಳ ಸೇವಾವಧಿಯಲ್ಲಿ ಒಂದು ದಿನವೂ ರಜೆಯನ್ನು ತೆಗೆದುಕೊಂಡಿಲ್ಲ. ಸಂಪೂರ್ಣ ಸಾರ್ವಜನಿಕರ ಸೇವೆಗೆಂದೇ ಈ 7 ವರ್ಷಗಳನ್ನು ಕಳೆದಿದ್ದಾರೆ. ಅದೇ ರೀತಿ ಸಿಎಂ ಯೋಗಿ ಆದಿತ್ಯನಾಥ್ ಕೂಡ ಒಂದೇ ಒಂದು ರಜೆಯನ್ನು ತೆಗೆದುಕೊಂಡಿಲ್ಲ. ದೇಶ ಹಾಗೂ ಉತ್ತರ ಪ್ರದೇಶ ಅಭಿವೃದ್ಧಿ ಪಥದತ್ತ ಸಾಗಲು ಇಂತಹ ನಾಯಕರೇ ಕಾರಣ ಎಂದು ಶರ್ಮಾ ಹೇಳಿದ್ದಾರೆ.
ನಿಜವಾದ ದೇಶಪ್ರೇಮಿ ಎಂದೂ ತನಗಾಗಿ ಕೆಲಸ ಮಾಡುವುದಿಲ್ಲ. ಆತ ಸಮಾಜಕ್ಕೆ ಸೇವೆ ಸಲ್ಲಿಸುತ್ತಾನೆ. ಅಂತಹ ವ್ಯಕ್ತಿ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಮರ್ಥನಿರುತ್ತಾನೆ ಎಂದು ಶರ್ಮಾ ಹೇಳಿದ್ರು.
ಬಿಜೆಪಿ ಎಂದಿಗೂ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವುದಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಎಲ್ಲಾ ರೀತಿಯ ಜನರಿಗೂ ಸರ್ಕಾರದ ಎಲ್ಲಾ ಯೋಜನೆಗಳನ್ನು ತಲುಪಿಸಲಾಗಿದೆ ಹಾಗೂ ಜನತೆ ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದ್ರು.
ಬಿಜೆಪಿ, ಹಿಂದೂ ಹಾಗೂ ಮುಸ್ಲಿಮರ ನಡುವೆ ಭೇದಭಾವ ಮಾಡುವುದಿಲ್ಲ. ಇದೇ ಕಾರಣದಿಂದಾಗಿ ಕಳೆದ 2 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಒಂದೇ ಒಂದು ಹಿಂದೂ – ಮುಸ್ಲಿಂ ಗಲಭೆ ಉಂಟಾಗಿಲ್ಲ ಎಂದು ಹೇಳಿದ್ರು.