ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಗಾಗ ದೇಶಾದ್ಯಂತ ಪ್ರವಾಸ ಮಾಡುತ್ತಾರೆ, ಆದರೆ ಮಣಿಪುರ ಒಂದು ಬಿಟ್ಟು ಮತ್ತೆಲ್ಲಾ ಕಡೆ ಹೋಗ್ತಾರೆ, ಮಣಿಪುರಕ್ಕೆ ಏಕೆ ಭೇಟಿ ನೀಡಿಲ್ಲ..? ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.
‘ಮಣಿಪುರ ಹೊರತುಪಡಿಸಿ ಬೇರೆಲ್ಲಾ ಕಡೆ ಮೋದಿ ಹೋಗುತ್ತಿದ್ದಾರೆ’
“ಮಣಿಪುರದಲ್ಲಿ ದುರದೃಷ್ಟಕರ ಘಟನೆ ಸಂಭವಿಸಿದೆ, ಆದರೆ ಪ್ರಧಾನಿ ಮೋದಿ ಬೀಚ್ ಗೆ ಹೋಗಿ, ಫೋಟೋ ಸೆಷನ್ ಮಾಡಿ ಸಮುದ್ರದಲ್ಲಿ ಈಜಿದರು, ನಡೆಯುತ್ತಿರುವ ದೇವಾಲಯ ನಿರ್ಮಾಣ ಸ್ಥಳದಲ್ಲಿ ಫೋಟೋಗಳಿಗಾಗಿ ಹೋದರು ಅಥವಾ ಕೇರಳ ಮತ್ತು ಮುಂಬೈಗೆ ಹೋದರು. ಅವರು ಎಲ್ಲಾ ಕಡೆ ಹೋಗುತ್ತಾರೆ, ಆದರೆ ಈ ಮಹಾನ್ ವ್ಯಕ್ತಿ ಮಣಿಪುರಕ್ಕೆ ಏಕೆ ಹೋಗಲಿಲ್ಲ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.