ನವದೆಹಲಿ : ಐಸಿಸಿ ಟಿ 20 ವಿಶ್ವಕಪ್ 2024 ಅನ್ನು ಗೆದ್ದ ಭಾರತೀಯ ಕ್ರಿಕೆಟ್ ತಂಡವು ಗುರುವಾರ ಬಾರ್ಬಡೋಸ್ ನಿಂದ ಹಿಂದಿರುಗಿದ ನಂತರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತು.
ಟೀಂ ಇಂಡಿಯಾ ಆಟಗಾರರನ್ನು ಮರಳಿ ಕರೆತರಲು ಬಿಸಿಸಿಐ ಚಾರ್ಟರ್ ಏರ್ ಇಂಡಿಯಾ ಬೋಯಿಂಗ್ ವಿಮಾನವನ್ನು ಕಳುಹಿಸಿತು ಮತ್ತು ವಿಶೇಷ ವಿಮಾನವು ಬೆಳಿಗ್ಗೆ 6:00 ಗಂಟೆಗೆ ನವದೆಹಲಿಯಲ್ಲಿ ಇಳಿಯಿತು. ಆಟಗಾರರು ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರಧಾನಿ ಮೋದಿಯವರನ್ನು ಭೇಟಿಯಾದರು.
ಟ್ರೋಫಿಯೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಕ್ರಿಕೆಟ್ ತಾರೆಯರು ಮೋದಿ ಜೊತೆ ಕೆಲಹೊತ್ತು ಮಾತುಕತೆ ನಡೆಸಿ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಈ ವೇಳೆ ತೆಗೆದ ಫೋಟೋದಲ್ಲಿ ಪ್ರಧಾನಿ ಮೋದಿ ಅವರು ಟ್ರೋಫಿ ಕಪ್ ಮುಟ್ಟದೇ ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಕೈ ಹಿಡಿದು ನಿಂತಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.