LVM3 M2/OneWeb India-1 ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಎಲ್ಲಾ 36 ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗೆ ಸೇರಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಭಾನುವಾರ ಮಾಹಿತಿ ನೀಡಿದೆ.
ISRO- LVM3-M2/OneWeb India-1 ರ ಅತ್ಯಂತ ಭಾರವಾದ ರಾಕೆಟ್ – UK ಮೂಲದ ಗ್ರಾಹಕರಿಗಾಗಿ 36 ಬ್ರಾಡ್ ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಲೋ ಅರ್ಥ್ ಆರ್ಬಿಟ್ ಗೆ(LEO) ಇರಿಸಲು ಭಾನುವಾರ ಮಧ್ಯರಾತ್ರಿ 12.07 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.
ಭಾನುವಾರದ ಮುಂಜಾನೆ ಟ್ವೀಟ್‌ನಲ್ಲಿ ಇಸ್ರೋ, “LVM3 M2/OneWeb India-1 ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಎಲ್ಲಾ 36 ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದೆ.
8,000 ಕೆ.ಜಿ.ವರೆಗಿನ ಉಪಗ್ರಹಗಳನ್ನು ಸಾಗಿಸುವ ಸಾಮರ್ಥ್ಯಕ್ಕಾಗಿ ಈ ವಾಹನವನ್ನು ಅತ್ಯಂತ ಭಾರವಾದ ವಾಹನ ಎಂದು ಕರೆಯಲಾಗುತ್ತದೆ. ಇದು LVM3 ನ ಚೊಚ್ಚಲ ವಾಣಿಜ್ಯ ಮಿಷನ್ ಮತ್ತು NSIL ನ ಮೊದಲ ಉಡಾವಣಾ ವಾಹನವಾಗಿರುವುದರಿಂದ ಈ ಕಾರ್ಯಾಚರಣೆ ಮಹತ್ವವನ್ನು ಪಡೆದುಕೊಂಡಿದೆ.
36 ಬ್ರಾಡ್‌ಬ್ಯಾಂಡ್ ಉಪಗ್ರಹಗಳ ಯಶಸ್ವಿ ಉಡಾವಣೆಗಾಗಿ ಇಸ್ರೋವನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಇದು ಆತ್ಮನಿರ್ಭರ ಭಾರತದ ಯಶಸ್ಸು ಎಂದು ಹೇಳಿದ್ದಾರೆ.
36 ಒನ್‌ವೆಬ್ ಉಪಗ್ರಹಗಳೊಂದಿಗೆ ತನ್ನ ಅತ್ಯಂತ ಭಾರವಾದ ರಾಕೆಟ್‌ನ ಯಶಸ್ವಿ ಉಡಾವಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇದು ಜಾಗತಿಕ ವಾಣಿಜ್ಯ ಉಡಾವಣಾ ಸೇವಾ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕತೆ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.