ಪುಣೆ: ಕೊರೋನಾ ಲಸಿಕೆ ಬಗ್ಗೆ ಪರಿಶೀಲನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇಂದು ದೇಶದ 3 ಮಹಾನಗರಗಳ ಲಸಿಕೆ ತಯಾರಿಕಾ ಕಂಪನಿಗಳಿಗೆ ಭೇಟಿ ನೀಡಿದ್ದಾರೆ.
ಲಸಿಕೆ ತಯಾರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಹಾರಾಷ್ಟ್ರದ ಪುಣೆಯ ಸೀರಂ ಇನ್ ಸ್ಟಿಟ್ಯೂಟ್ ಸಿಇಒ ಆದಾರ್ ಪೂನಾವಾಲಾ ಮಾಹಿತಿ ನೀಡಿದ್ದಾರೆ. 2021 ರ ಜುಲೈ ವೇಳೆಗೆ 30 ರಿಂದ 40 ಕೋಟಿ ಡೋಸೇಜ್ ಲಸಿಕೆ ಉತ್ಪಾದಿಸುವ ಬಗ್ಗೆ ತಿಳಿಸಿದ್ದು, ಪ್ರತಿ ತಿಂಗಳು 5 ರಿಂದ 6 ಕೋಟಿ ದೋಸ್ ಲಸಿಕೆ ಉತ್ಪಾದಿಸಲಾಗುವುದು. ಈ ಲಸಿಕೆ ವಿಶ್ವದಲ್ಲೇ ಪ್ರಥಮವಾಗಲಿದೆ ಎಂದು ಹೇಳಿದ್ದಾರೆ.
ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ತಜ್ಞರ ತಂಡದೊಂದಿಗೆ ಪ್ರಧಾನಿ ಸಂವಾದ ನಡೆಸಿದ್ದು, ಲಸಿಕೆ ತಯಾರಿಕೆಯನ್ನು ಇನ್ನಷ್ಟು ಹೆಚ್ಚಿಸಲು ತಿಳಿಸಿದ್ದಾರೆ. ಲಸಿಕೆ ಪ್ರಗತಿಯ ಬಗ್ಗೆ ವಿವರಗಳನ್ನು ಪಡೆದು ಉತ್ಪಾದನಾ ಸೌಲಭ್ಯಗಳನ್ನು ವೀಕ್ಷಿಸಿದ್ದಾರೆ.