ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ನೆರವಾಗಲು ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ವಿಶೇಷ ಯೋಜನೆ ಘೋಷಿಸಿದೆ.
ಅನಾಥರಾದ ಮಕ್ಕಳಿಗೆ 18 ವರ್ಷ ತುಂಬಿದ ಕೂಡಲೇ 10 ಲಕ್ಷ ರೂಪಾಯಿ ಮೀಸಲು ನಿಧಿಯಿಂದ ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ.
ಮಕ್ಕಳು 23 ವರ್ಷಕ್ಕೆ ಕಾಲಿಟ್ಟಾಗ ಉನ್ನತ ಶಿಕ್ಷಣ ಮತ್ತಿತರ ಖರ್ಚಿಗೆ 10 ಲಕ್ಷ ರೂಪಾಯಿ ನಗದು ನೆರವು ನೀಡಲಾಗುವುದು.
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯ, ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ.
ಮಕ್ಕಳ ಸಮವಸ್ತ್ರ, ಪುಸ್ತಕಗಳ ಖರೀದಿಗೆ ಪುಸ್ತಕ ಖರೀದಿಗೆ ಪಿಎಂ ಕೇರ್ಸ್ ನಿಧಿಯಿಂದ ಆರ್ಥಿಕ ನೆರವು ನೀಡಲಾಗುವುದು.
ಪೋಷಕರನ್ನು ಕಳೆದುಕೊಂಡಿರುವ ಅನಾಥ ಮಕ್ಕಳಿಗೆ 5 ಲಕ್ಷ ರೂ. ಆರೋಗ್ಯವಿಮೆ, ಖಾಸಗಿ ಶಾಲೆಯಲ್ಲಿ ಸೇರಿದ ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಶುಲ್ಕ ಪಾವತಿ ಮಾಡಲಾಗುತ್ತದೆ.
ಪದವಿಪೂರ್ವ ಮತ್ತು ವೃತ್ತಿಪರ ಕೋರ್ಸುಗಳಿಗೆ ಕೋರ್ಸ್ ಶುಲ್ಕಕ್ಕೆ ಸಮಾನವಾದ ವಿದ್ಯಾರ್ಥಿ ವೇತನ ನೀಡಲಾಗುವುದು. ಪಿಎಂ ಕೇರ್ಸ್ ನಿಂದ ವಿದ್ಯಾರ್ಥಿ ವೇತನ ನೀಡಲಾಗುವುದು. ಮೇ 25 ರವರೆಗೆ ದೇಶದಲ್ಲಿ 577 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.