
ಮೈಸೂರು: ಬೆಂಗಳೂರು -ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಗಾಗಿ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಶಾಸಕ ರಾಮದಾಸ್ ಅವರಿಗೆ ಪ್ರೀತಿಯಿಂದ ಕಿವಿ ಹಿಂಡಿ ಬೆನ್ನಿಗೆ ಗುದ್ದಿದ್ದಾರೆ.
ಮೈಸೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಬಿಜೆಪಿ ನಾಯಕರು ಅವರನ್ನು ಸ್ವಾಗತಿಸಲು ನಿಂತಿದ್ದರು. ಎಲ್ಲಾ ಮುಖಂಡರನ್ನು ನಮಸ್ಕರಿಸುತ್ತಾ ಬಂದ ಪ್ರಧಾನಿ ಮೋದಿ ರಾಮದಾಸ್ ಅವರು ಎದುರಾದ ಕೂಡಲೇ ನಮಸ್ಕರಿಸಿ ಕಿವಿ ಹಿಂಡಿ ಬೆನ್ನು ತಟ್ಟಿ ಕುಶಲೋಪರಿ ವಿಚಾರಿಸಿದ್ದಾರೆ.
ಕಳೆದ ಸಲ ಯೋಗ ದಿನಾಚರಣೆ ಸಂದರ್ಭದಲ್ಲಿ ಮೈಸೂರಿಗೆ ಬಂದಿದ್ದ ಪ್ರಧಾನಿ ವೇದಿಕೆಯಲ್ಲಿ ರಾಮದಾಸ್ ಅವರ ಬೆನ್ನಿಗೆ ಪ್ರೀತಿಯಿಂದ ಗುದ್ದಿ ಮಾತನಾಡಿಸಿದ್ದು ರಾಷ್ಟ್ರವ್ಯಾಪಿ ಗಮನ ಸೆಳೆದಿತ್ತು.