ಬೆಂಗಳೂರು: ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಿರುವ ಪ್ರಧಾನಿ ನರೇಂದ್ರ ಮೋದಿ ಇಂದೂ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ನಾಳೆ ಬೆಳಗ್ಗೆ 10:35ಕ್ಕೆ ರಾಜಭವನದಿಂದ ರಸ್ತೆಯ ಮೂಲಕ ಹೆಲಿಪ್ಯಾಡ್ ಗೆ ತೆರಳುವ ಮೋದಿ ಎಂಐ 17 ಹೆಲಿಕಾಪ್ಟರ್ ನಲ್ಲಿ ಕೋಲಾರದತ್ತ ಪ್ರಯಾಣ ಬೆಳೆಸುವರು. 11:30ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 11:30 ರಿಂದ 12.15ರವರೆಗೆ ಸಮಾವೇಶದಲ್ಲಿ ಭಾಗವಹಿಸಲಿರುವ ಅವರು ಮಧ್ಯಾಹ್ನ 12 20ಕ್ಕೆ ಸಮಾವೇಶ ಸ್ಥಳದಿಂದ ಪ್ರಯಾಣ ಬೆಳೆಸುವರು.
ಮಧ್ಯಾಹ್ನ 1.15ಕ್ಕೆ ಚನ್ನಪಟ್ಟಣಕ್ಕೆ ಭೇಟಿ ನೀಡಲಿದ್ದು, 1.25ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಮೋದಿ ಭಾಗವಹಿಸಲಿದ್ದಾರೆ. 1:30 ರಿಂದ 2 15ರವರೆಗೆ ನಡೆಯುವ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಹೆಲಿಕಾಪ್ಟರ್ ನಲ್ಲಿ ಬೇಲೂರಿನತ್ತ ಪ್ರಯಾಣ ಬೆಳೆಸುವರು. 3:40ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸುವರು.
ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ ಮೈಸೂರಿನತ್ತ ಪ್ರಯಾಣ ಬೆಳೆಸುವರು. ಸಂಜೆ ಮೈಸೂರಿನಲ್ಲಿ ವಿದ್ಯಾಪೀಠ ವೃತ್ತ ತಲುಪಲಿರುವ ಅವರು 5 45 ರಿಂದ 6.30 ರವರೆಗೆ ರೋಡ್ ಶೋ ನಡೆಸಲಿದ್ದಾರೆ. ಮೈಸೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಸೇನಾ ವಿಮಾನದಲ್ಲಿ 7 ಗಂಟೆಗೆ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.