ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಭಾರತೀಯ ವಲಸಿಗರು ‘ಭಾರತ್ ಮಾ ಕಾ ಶೇರ್’ ಎಂದು ಘೋಷಣೆ ಕೂಗಿದ್ದಾರೆ.
ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಜಪಾನ್ ನ ಟೋಕಿಯೊ ನಗರಕ್ಕೆ ಆಗಮಿಸಿದರು. ಅವರ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದ ಭಾರತೀಯ ವಲಸಿಗರು ‘ಭಾರತ್ ಮಾ ಕಾ ಶೇರ್’ ಎಂದು ಕೂಗಿದ್ದಾರೆ.
ಪ್ರಧಾನಿ ಮೋದಿಯವರನ್ನು ಜಪಾನ್ ಗೆ ಸ್ವಾಗತಿಸಲು ನಮಗೆ ತುಂಬಾ ಸಂತೋಷವಾಗಿದೆ. ಅವರು ನಮ್ಮನ್ನು ಎಲ್ಲೆಡೆ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಜಪಾನ್ ನಲ್ಲಿ ನೆಲೆಸಿರುವ ಭಾರತೀಯರು ಹೇಳಿದ್ದಾರೆ. ಜನರು ಹಿಡಿದಿದ್ದ ಒಂದು ಫಲಕದಲ್ಲಿ, ‘ಜೋ 370 ಹತಾಯೆ ಹೈ ವೋ ಟೋಕಿಯೋ ಆಯೇ ಹೈ(ಆರ್ಟಿಕಲ್ 370 ಅನ್ನು ಹಿಂತೆಗೆದುಕೊಂಡವರು ಟೋಕಿಯೋಗೆ ಬಂದಿದ್ದಾರೆ)’ ಎಂದು ಬರೆಯಲಾಗಿತ್ತು.
ಕ್ವಾಡ್ ನಾಯಕರ ಸಭೆಯು ಮೇ 24 ರಂದು ನಡೆಯಲಿದ್ದು, ಪ್ರಭಾವಿ ಗುಂಪಿನ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳನ್ನು ಚರ್ಚಿಸುವ ಗುರಿ ಹೊಂದಿದೆ.