ಜೈಪುರ: ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಕೇವಲ 600 ರೂ.ನಷ್ಟು ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಗಳನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಿದ್ದಾರೆ.
ಗುರುವಾರ ಜೋಧ್ ಪುರ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಅವರು ಮಹತ್ವದ ಪ್ರಕಟಣೆ ನೀಡಿದ್ದಾರೆ.
ಈ ಘೋಷಣೆಯೊಂದಿಗೆ ಎಲ್ಲಾ ಸಹೋದರಿಯರು ಹೆಚ್ಚು ಉತ್ಸಾಹದಿಂದ ಹಬ್ಬಗಳನ್ನು ಆಚರಿಸುತ್ತಾರೆ. ಈ ನಿರ್ಧಾರವು ರಾಜಸ್ಥಾನದಲ್ಲಿ ವಾಸಿಸುವ 70 ಲಕ್ಷ ಕುಟುಂಬಗಳು ಸೇರಿದಂತೆ ರಾಷ್ಟ್ರದಾದ್ಯಂತ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ರಾಜಸ್ಥಾನದಲ್ಲಿ ಗೆಹ್ಲೋಟ್ ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಗಳ ಜನಪ್ರಿಯತೆಯನ್ನು ಎದುರಿಸುವ ಗುರಿಯನ್ನು ಹೊಂದಿರುವ ಈ ಘೋಷಣೆಯನ್ನು ಪ್ರಧಾನ ಮಂತ್ರಿಯವರ ಕಾರ್ಯತಂತ್ರದ ಕ್ರಮವೆಂದು ಪರಿಗಣಿಸಲಾಗಿದೆ.
ಪ್ರಸ್ತುತ, ಗೆಹ್ಲೋಟ್ ಸರ್ಕಾರವು ಉಜ್ವಲ ಯೋಜನೆಯ 76 ಲಕ್ಷ ಫಲಾನುಭವಿ ಕುಟುಂಬಗಳಿಗೆ ತಲಾ 500 ರೂಪಾಯಿ ವೆಚ್ಚದಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಒದಗಿಸುತ್ತದೆ.