
ನವದೆಹಲಿ: ಶುಕ್ರವಾರ ನವದೆಹಲಿಯಲ್ಲಿ ನಡೆದ 98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ವೇದಿಕೆ ಹಂಚಿಕೊಂಡಿದ್ದಾರೆ.
ರಾಜಕೀಯದಲ್ಲಿ ತಮ್ಮ ಹಿರಿಯರಿಗೆ ಪ್ರಧಾನಿ ಆತ್ಮೀಯವಾಗಿ ಉಪಚರಿಸಿದ್ದಾರೆ. ಶರದ್ ಪವಾರ್ ಕಾರ್ಯಕ್ರಮದ ಸಮಯದಲ್ಲಿ ಕುಳಿತುಕೊಳ್ಳಲು ಮುಂದಕ್ಕೆ ಹೋದಾಗ ಪ್ರಧಾನಿ ಮೋದಿ ಪವಾರ್ ಅವರ ಕುರ್ಚಿಯನ್ನು ಸರಿಹೊಂದಿಸಿ ಕುಳಿತುಕೊಳ್ಳುವಂತೆ ತಿಳಿಸಿದ್ದಾರೆ.
ನೀರಿನ ಬಾಟಲಿಯನ್ನು ತೆರೆದು ಪವಾರ್ ಬಳಿ ಇಟ್ಟಿದ್ದ ಖಾಲಿ ಲೋಟದಲ್ಲಿ ನೀರು ಸುರಿದು ಅವರಿಗೆ ಕೊಟ್ಟಿದ್ದಾರೆ. ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಪ್ರಾರಂಭಿಸಬೇಕಿದ್ದ ಪ್ರಧಾನಿ ಮೋದಿ, ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ಪವಾರ್ ಅವರನ್ನು ಮುಂದೆ ಬಂದು ತಮ್ಮೊಂದಿಗೆ ಗೌರವ ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ.
ಪ್ರಧಾನಿಯವರ ವಿಶೇಷ ಆಸಕ್ತಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿತು. ಪ್ರಧಾನಿ ಮೋದಿ ತಮ್ಮ ಭಾಷಣ ಆರಂಭಿಸುತ್ತಿದ್ದಂತೆ, ಇಂದು, ಶರದ್ ಪವಾರ್ ಅವರ ಆಹ್ವಾನದ ಮೇರೆಗೆ, ಈ ಹೆಮ್ಮೆಯ ಸಂಪ್ರದಾಯಕ್ಕೆ ಸೇರಲು ನನಗೆ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.
ಸಮಾರಂಭದ ಉದ್ದಕ್ಕೂ ಪ್ರಧಾನಿ ಮೋದಿ ಮತ್ತು ಪವಾರ್ ಪ್ರೀತಿಯಿಂದ ಮಾತನಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ವೈರಲ್ ಆಗಿದೆ.
#WATCH | Delhi: Prime Minister Narendra Modi and NCP chief Sharad Pawar at the inauguration of the 98th Akhil Bharatiya Marathi Sahitya Sammelan.
(Source: DD News) pic.twitter.com/W2TJpqyeqv
— ANI (@ANI) February 21, 2025