ನವದೆಹಲಿ: ದೇಶದಲ್ಲಿ ಇಂದು ಗ್ರಾಮಗಳಲ್ಲಿಯೂ ಸ್ಟಾರ್ಟ್ ಅಪ್ ಶುರುವಾಗಿವೆ. ವಿಶ್ವದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಭರವಸೆ ಮೂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
‘ಮನ್ ಕಿ ಬಾತ್’ನ 89 ನೇ ಆವೃತ್ತಿಯಲ್ಲಿ ದೇಶದ ಜನ್ನರನ್ನುದ್ದೇಶಿಸಿ ಮಾತನಾಡಿದ ಅವರು, ಸ್ಟಾರ್ಟ್ ಅಪ್ ಮೂಲಕ ನವಭಾರತ ನಿರ್ಮಾಣವಾಗುತ್ತಿದೆ. ಉತ್ತಮ ಮಾರ್ಗದರ್ಶನದೊಂದಿಗೆ ಸ್ಟಾರ್ಟ್ ಅಪ್ ವಿಸ್ತರಣೆಯಾಗುತ್ತಿವೆ. ಸ್ಟಾರ್ಟ್ ಅಪ್ ಗಳು ಯುವ ಭಾರತದ ಸ್ಪೂರ್ತಿ. ಅವು ನವ ಭಾರತದ ಚೈತನ್ಯವನ್ನು ಪ್ರತಿಬಿಂಬಿಸುತ್ತವೆ. ಸರಿಯಾದ ಮಾರ್ಗದರ್ಶನವು ಸ್ಟಾರ್ಟ್ ಅಪ್ ಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ಹೇಳಿದರು.
ಭವಿಷ್ಯದಲ್ಲಿ ನಾವು ಭಾರತದಲ್ಲಿ ಹೊಸ ಎತ್ತರವನ್ನು ತಲುಪುವ ಸ್ಟಾರ್ಟ್ ಅಪ್ ಗಳಿಗೆ ಸಾಕ್ಷಿಯಾಗುತ್ತೇವೆ ಎಂದು ನನಗೆ ವಿಶ್ವಾಸವಿದೆ. ಸರಿಯಾದ ಮಾರ್ಗದರ್ಶನ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಭಾರತದಲ್ಲಿ ಸಹಾಯ ಮಾಡಲು ಬದ್ಧವಾಗಿರುವ ಅನೇಕ ಮಾರ್ಗದರ್ಶಕರು ಇದ್ದಾರೆ ಎಂದರು.
ನಮ್ಮಲ್ಲಿ ವೈವಿಧ್ಯಮಯ ಸಂಸ್ಕೃತಿ ಇದೆ. ಭಾರತ ವಿವಿಧ ಭಾಷೆ ಮತ್ತು ಸಂಸ್ಕೃತಿಯಿಂದ ಶ್ರೀಮಂತವಾಗಿದೆ. ತೀರ್ಥಯಾತ್ರೆಗೆ ಹೊರಟಾಗಲೆಲ್ಲಾ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾವಿರಾರು ಯಾತ್ರಿಕರು ಆಗಮಿಸುತ್ತಿರುವ ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆ ನಡೆಯುತ್ತಿದೆ. ಕೇದಾರನಾಥದಲ್ಲಿ ಕೆಲವು ಯಾತ್ರಾರ್ಥಿಗಳು ಹರಡಿದ ಕಸದಿಂದ ಯಾತ್ರಿಕರು ಬೇಸರವಾಗಿರುವುದನ್ನು ನಾನು ನೋಡಿದ್ದೇನೆ. ಕೆಲವು ಯಾತ್ರಾರ್ಥಿಗಳು ತಮ್ಮ ಯಾತ್ರೆಯ ಸಮಯದಲ್ಲಿ ತಮ್ಮ ವಾಸ್ತವ್ಯದ ಹತ್ತಿರದ ಪ್ರದೇಶಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ ಎಂದು ಹೇಳಿದರು.
ಯೋಗ ದಿನದ ಈ ವರ್ಷದ ಥೀಮ್ ಮಾನವೀಯತೆಗಾಗಿ ಯೋಗ ಆಗಿದೆ. ಜೂನ್ 21 ರಂದು ಜಗತ್ತು ಯೋಗ ದಿನವನ್ನು ಆಚರಿಸುತ್ತದೆ. ಈ ವರ್ಷದ ಥೀಮ್ ‘ಯೋಗ ಫಾರ್ ಮಾನವೀಯತೆ ಆಗಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಭಾಷಾ ವೈವಿಧ್ಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಅನೇಕರು ಕೆಲಸ ಮಾಡುತ್ತಿದ್ದಾರೆ. ಭಾರತವು ವಿಭಿನ್ನ ಭಾಷೆಗಳು, ಉಪಭಾಷೆಗಳನ್ನು ಹೊಂದಿದೆ. ನಮ್ಮ ದೇಶದಲ್ಲಿ ಈ ಭಾಷಾ ವೈವಿಧ್ಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅನೇಕ ಜನರು ನಮ್ಮ ದೇಶದಲ್ಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.