ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿ ರೈತರಿಗೆ ಹೀಗೊಂದು ಯೋಜನೆ ಮೂಲಕ ವಾರ್ಷಿಕ 6,000 ರೂ.ಗಳ ಬದಲಿಗೆ ಮಾಸಿಕ 3,000 ರೂ.ಗಳ ನೆರವಿನ ಧನ ಪಡೆಯಬಹುದಾಗಿದೆ.
ವಾರ್ಷಿಕ 36,000 ರೂ.ಗಳ ಪಿಂಚಣಿ ನೀಡಬಲ್ಲ ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ. 60 ವರ್ಷ ವಯಸ್ಸು ದಾಟಿದ ರೈತರಿಗೆ ಕಿಸಾನ್ ಮಾನ್ ಧನ್ ಮೂಲಕ ಮಾಸಿಕ 3,000 ರೂ.ಗಳ ಪಿಂಚಣಿ ನೀಡುವ ಯೋಜನೆ ಇದಾಗಿದೆ. ಈ ಯೋಜನೆಗೆ ನಿಮ್ಮದೊಂದು ಪುಟ್ಟ ಹೂಡಿಕೆ ಮೂಲಕ ಖಾತ್ರಿಪಡಿಸಿದ ಪಿಂಚಣಿಯನ್ನು ನೀವೀಗ ಪಡೆಯಬಹುದಾಗಿದೆ.
ಒಳ ಉಡುಪು ಸ್ವಚ್ಛಗೊಳಿಸುವಾಗ ಇರಲಿ ಈ ಎಚ್ಚರ….!
ಕೇಂದ್ರ ಸರ್ಕಾರದ ಈ ಯೋಜನೆಯ ಫಲಾನುಭವಿಗಳಾಗಲು ನಿಮಗೆ ಕೆಲವೊಂದು ದಾಖಲೆಗಳು ಬೇಕಾಗುತ್ತವೆ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕ ಹೀಗೆ. ಆದರೆ ನೀವು ಪಿಎಂ ಕಿಸಾನ್ ಯೋಜನೆಯಲ್ಲಿದ್ದರೆ ಯಾವುದೇ ದಾಖಲೆ ಪೂರೈಸಬೇಕಾಗಿಲ್ಲ. 18-40 ವರ್ಷ ವಯಸ್ಸಿನ ನಡುವಿನ ರೈತರು ಈ ಯೋಜನೆಯ ಭಾಗವಾಗಬಹುದು. ವ್ಯಕ್ತಿಯ ವಯಸ್ಸಿನ ಅನುಸಾರ ಹೂಡಿಕೆ ದುಡ್ಡನ್ನು ನಿಗದಿ ಪಡಿಸಲಾಗುವುದು.
ಯಾರಿಗೆ ಈ ಯೋಜನೆಯ ಲಾಭ ದೊರಕುತ್ತದೆ ?
1. ಗರಿಷ್ಠ 2 ಹೆಕ್ಟೇರ್‌ಗಳಷ್ಟು ಬಿತ್ತಬಲ್ಲ ಭೂಮಿ ಹೊಂದಿರುವವರು.
2. 20-40 ವರ್ಷ ವಯಸ್ಸಿನ ನಡುವಿನ ರೈತರು ತಮ್ಮ ವಯಸ್ಸಿನ ಅನುಸಾರ 55-200 ರೂ./ಮಾಸಿಕ ಹೂಡಿಕೆ ಮಾಡಬೇಕಾಗುತ್ತದೆ.
3. 18ನೇ ವಯಸ್ಸಿನ ಯೋಜನೆ ಸೇರುವ ರೈತರು ಮಾಸಿಕ 55 ರೂ.ಗಳ ಶುಲ್ಕ ಪಾವತಿ ಮಾಡಿದರೆ ಸಾಕು.
4. ರೈತನಿಗೆ 30 ವರ್ಷ ವಯಸ್ಸಾಗಿದ್ದರೆ ಆತ 110 ರೂ.ಗಳ ಹೂಡಿಕೆ ಮಾಡಿದರೆ ಸಾಕು.
5. ನೀವು 40ನೇ ವಯಸ್ಸಿನಲ್ಲಿ ಯೋಜನೆಗೆ ಸೇರಿಕೊಂಡರೆ ಮಾಸಿಕ 200 ರೂ.ಗಳ ಹೂಡಿಕೆ ಮಾಡಿದರೆ ಸಾಕು.